ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭದಲ್ಲಿ ವಿದೇಶಿ ಕಪ್ಪು ಹಣ ತರುವುದಾಗಿ ಮತದಾರರಿಗೆ ಭರವಸೆ ನೀಡಿ ಇದೀಗ ಪೂರ್ವ ಸಿದ್ಧತೆಯಿಲ್ಲದೆ ಏಕಾಯೇಕಿ 500 ಮತ್ತು ಸಾವಿರ ನೋಟನ್ನು ರದ್ದುಗೊಳಿಸುವ ಮೂಲಕ ಜನಸಾಮಾನ್ಯರಿಗೆ ಅಡ್ಡಿ ಪಡಿಸುತ್ತಿರುವ ವಿರುದ್ಧ ಪಕ್ಷವು ಹೋರಾಟ ನಡೆಸುವುದಾಗಿ ಸಿಪಿಐ ರಾಜ್ಯ ಸಮಿತಿ ಸಹ ಕಾರ್ಯದಶರ್ಿ ಸಾತಿ ಸುಂದರೇಶ್ ಎಚ್ಚರಿಸಿದ್ದಾರೆ.

cpi

ಬಂಟ್ವಾಳ ಕಾಮ್ರೆಡ್ ಎ.ಶಾಂತಾರಾಮ ಪೈ ಸ್ಮಾರಕ ಭವನದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ವತಿಯಿಂದ ಭಾನುವಾರ ನಡೆದ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಕೇವಲ ಪೊಳ್ಳು ಭರವಸೆಗೆ ಬದಲಾಗಿ ಪ್ರಧಾನಿ ಅವರು ಕಪ್ಪು ಹಣದ ಜೊತೆಗೆ ಕಪ್ಪು ಭೂಮಿ ಮತ್ತು ಕಪ್ಪು ಚಿನ್ನದ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಹಿರಿಯ ಮುಖಂಡ ಪಿ.ಸಂಜೀವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸಕರ್ಾರವು ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಪತನಗೊಂಡಿದ್ದು, ಇದೀಗ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವೂ ಬೆಲೆಯೇರಿಕೆ ಮತ್ತು ಕಾರ್ಮಿಕ ವಿರೋಧಿ ನೀತಿಯಿಂದ ಜನರ ಶಾಪಕ್ಕೆ ಗುರಿಯಾಗಿದೆ ಎಂದರು.

ಅವಿಭಜಿತ ಜಿಲ್ಲಾ ಸಿಪಿಐ ಕಾರ್ಯದರ್ಶಿ ವಿ.ಕುಕ್ಯಾನ್, ಹಿರಿಯ ಮುಖಂಡ ಬಿ.ವಿಶ್ವನಾಥ ನಾಯ್ಕ್ ಮತ್ತಿತರರು ಮಾತನಾಡಿದರು. ತಾಲ್ಲೂಕು ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *