ಮಂಗಳೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್‍ಯು. ಎಸ್. ಎ.ವಾಮಂಜೂರು ಇದರ ವತಿಯಿಂದ ಮಕ್ಕಳ ಹಕ್ಕುಗಳ ಸಪ್ತಾಹ ಕಾರ್ಯಕ್ರಮ ನ. 19ರಂದು ಶಾಲಾ ಸಭಾಂಗಣದಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ರಾಷ್ಟ್ರೀಯ ಮಾನವ ಹಕ್ಕು ಸಮಿತಿ ದ.ಕ. ಜಿಲ್ಲೆಯ ಅಧ್ಯಕ್ಷ ಆನಂದ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಮಾತ್ರವಲ್ಲದೆ, ಕರ್ತವ್ಯದ ಜೊತೆಗೆ ಒಳಿತಿಗಾಗಿ ಬದುಕಿದರೆ ಸಾರ್ಥಕ ಜೀವನ ನಡೆಸಲು ಸಾಧ್ಯವಿದೆ. ನಿಶ್ಚಿತ ಗುರಿಯನ್ನುಇಟ್ಟುಕೊಂಡು ಬಲಿಷ್ಠ ಸದೃಡದೇಶದ ನಿರ್ಮಾಣದಲ್ಲಿ ಸಕ್ರೀಯವಾಗಿ ಪಾಲ್ಗೋಳ್ಳೋಣ. ಪರಸ್ಪರ ಸ್ನೇಹ, ಸಂಬಂಧ, ಕಷ್ಟ ಸುಖಗಳನ್ನು ಹಂಚಿ ಸಾಮರಸ್ಯ ಜೀವನ ಸಡೆಸೋಣ. ಮಕ್ಕಳ ಹಕ್ಕುಗಳ ಉದ್ದೇಶ ಸಫಲತೆಯನ್ನು ಕಾಣುವುದು ಅದನ್ನು ಸಾಕಾರಗೊಳಿಸಲು ಶ್ರಮಿಸಿದಾಗ ಮಾತ್ರ ತಾವು ಅಭಿವೃದ್ಧಿಯಾಗುವುದರ ಜೊತೆಗೆ ಸದೃಡ ಭಾರತ ನಿರ್ಮಾಣವಾಗುವುದು ಎಂದು ತಿಳಿಸಿದರು.
ಎಸ್. ಡಿ. ಎಂ.ಮಂಗಳಜ್ಯೊತಿ ಸಮಗ್ರ ಶಾಲೆಯ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಅಶೋಕ್‍ಕುಮಾರ್ ಪಿ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುತ್ತಾ ನಮ್ಮಲ್ಲಿ ಮಗುವಿನ ಬಗ್ಗೆ ಪ್ರೀತಿ ಇರಬೇಕು. ನಾವು ಮಗುವಿಗಾಗಿ ಕೆಲಸ ಮಾಡುವುದಕ್ಕೆ ಸಮಯ ಸಿಕ್ಕಾಗ ಸಹಾಯ ಮಾಡಬೇಕು.ಮಕ್ಕಳ ಹಕ್ಕುಗಳ ನಿರಾಕರಣೆ ಮಾಡದೆಅವರ ಶ್ರೇಯೋಭಿವೃದ್ಧಿಗೆ ಶ್ರಮಿಸೋಣಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್. ಡಿ. ಎಂ ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್, ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳ ಸಾಗಣಿಕೆ ಹೆಚ್ಚಾಗುತ್ತಿದ್ದು ಇದನ್ನು ತಡೆಯದಿದ್ದರೆ ಮುಂದಿನ ದಿನ ಅಪಾಯತಪ್ಪಿದ್ದಲ್ಲ. ಮಕ್ಕಳ ಹಕ್ಕುಗಳ ಬಗ್ಗೆ ಮಕ್ಕಳಿಗೆ ತಿಳಿಸುವುದು ಮಾತ್ರವಲ್ಲದೆ ಪೋಷಕರಿಗೂ ಸಹ ಇದರ ಬಗ್ಗೆ ಮಾಹಿತಿಯನ್ನು ನೀಡಿ ಮಕ್ಕಳನ್ನು ರಕ್ಷಣೆ ಮಾಡಬೇಕೆಂದು ತಿಳಿಸಿದರು. ಮಕ್ಕಳ ಹಕ್ಕು ಸಪ್ತಾಹದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮುಖ್ಯೋಪಾಧ್ಯಾಯಿನಿ ಮಾರ್ಯೇಟ್ ಮಸ್ಕರೇನಸ್‍ಎಸ್.ಡಿ.ಎಂ ಐ. ಟಿ.ಐ.ನ ಪ್ರಾಂಶುಪಾಲರಾದ ನರೇಂದ್ರ, ಮಕ್ಕಳ ಸಂಘದ ಪದಾಧಿಕಾರಿಗಳಾದ ಪ್ರಜ, ಭವ್ಯಶ್ರೀ, ಮಾಸ್ಟರ್ ವಿಘ್ನೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಂಗಳ ಜ್ಯೋತಿ ಸಮಗ್ರ ಶಾಲೆ, ಚೈಲ್ಡ್‍ಫಂಡ್‍ಇಂಟರ್ ನ್ಯಾಷನಲ್ ಯು.ಎಸ್. ಎ. ಇದರ ಯೋಜನಾಧಿಕಾರಿ ಪುನೀತ್ ಶೆಟ್ಟ್ಟಿ ಈ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಎಲ್ಲರನ್ನು ಸ್ವಾಗತಿಸಿದರು. ರಮ್ಯ ಕಾರ್ಯಕ್ರಮ ನಿರೂಪಿಸಿದರು, ಹರೀಶ್ ಕುಲಶೇಖರ್ ವಂದಿಸಿದರು, ಲೀಲಾವತಿ ಸಹಕರಿಸಿದರು.

