ಮೂಡುಬಿದಿರೆ: ಸಹಕಾರಿ ಸಪ್ತಾಹದಂಗವಾಗಿ ಮೂಡುಬಿದಿರೆ ಕೋ-ಅಪರೇಟಿವ್ ಸರ್ವೀಸ್ ಬ್ಯಾಂಕ್‍ನ ವತಿಯಿಂದ ಪ್ರಾಯೋಜಿಸಲ್ಪಟ್ಟ ಸ್ಥಳೀಯ ರೈತರ ತರಕಾರಿ ಮಾರುಕಟ್ಟೆಯನ್ನು ಮಂಗಳೂರು ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ರಾಜೇಂದ್ರ ಕುಮಾರ್ ಮಂಗಳವಾರ ಸಂಜೆ ಎಸ್‍ಸಿಡಿಸಿಸಿ ಬ್ಯಾಂಕ್‍ನ ಆವರಣದಲ್ಲಿ ಉದ್ಘಾಟಿಸಿದರು.
ಎಂಸಿಎಸ್ ಬ್ಯಾಂಕ್‍ನ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಸಹಕಾರಿ ಯೂನಿಯನ್‍ನ ನಿರ್ದೇಶಕ ಬಾಹುಬಲಿ ಪ್ರಸಾದ್, ಪ್ರೇಮಾ ಸಾಲ್ಯಾನ್, ಸಿ.ಹೆಚ್. ಗಫೂರ್, ಉದ್ಯಮಿ ಶ್ರೀಪತಿ ಭಟ್, ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಮಂಗಳೂರು ಅಕಾಶವಾಣಿಯ ವಸಂತ ಪೆರ್ಲ, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ರಾಜವರ್ಮ ಬೈಲಂಗಡಿ ಉಪಸ್ಥಿತರಿದ್ದರು.

