ಬೆಂಗಳೂರು: ಸತತ 48 ಗಂಟೆಗಳ ಕಾರ್ಯಾಚರಣೆ ಬಳಿಕ ತಿಪ್ಪೆಗೊಂಡನಹಳ್ಳಿ ಡ್ಯಾಂ ನಲ್ಲಿ ಶೂಟಿಂಗ್ ವೇಳೆ ನೀರಿನಲ್ಲಿ ಮುಳುಗಿದ್ದ ಒಂದು ಶವ ಪತ್ತೆ. ಎನ್`ಡಿಆರ್`ಎಫ್ ತಂಡ ಶವವನ್ನ ಹೊರತಂದಿದೆ. ಆದರೆ ದೇಹ ಊದಿಕೊಂಡಿದ್ದರಿಂದ ಗುರುತಿಗೆ ಕಷ್ಟವಾಗಿದ್ದು, ಶವ ಯಾರದೆಂದು ಇನ್ನೂ ಕಂಡು ಬಂದಿಲ್ಲ. 2 ನಟರಲ್ಲಿ ಉದಯ್ ತಲೆಕೂದಲು ಜಾಸ್ತಿ ಇರುವುದರಿಂದ ಶವವನ್ನು ಉದಯ್ ಎಂದು ಅಂದಾಜಿಸಲಾಗಿತ್ತು. ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
