ಮೂಡುಬಿದಿರೆ: ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಮೂಡಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆ ಇವುಗಳ ಆಶ್ರಯದಲ್ಲಿ ಎರಡು ದಿನಗಳು ನಡೆದ ಮೂಡಬಿದಿರೆ ವಲಯ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ಶಿರ್ತಾಡಿಯ ಹೋಲಿ ಏಂಜಲ್ಸ್ ಶಾಲೆ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ, ಬಾಲಕಿಯರ ವಿಭಾಗದಲ್ಲಿ ಹೋಲಿ ಏಂಜಲ್ಸ್ ಶಾಲೆ, ಹೈಸ್ಕೂಲ್ ಬಾಲಕರ ವಿಭಾಗದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ, ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ರಾಜ್ ಸೋಪಾನ ದತ್ತ್, ಬಾಲಕಿಯರ ವಿಭಾಗದಲ್ಲಿ ಶಿರ್ತಾಡಿ ಹೋಲಿ ಏಂಜಲ್ಸ್ ಶಾಲೆಯ ಜೆಸ್ವಿನ್ ಲೋಬೋ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದರು. 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಶಿವಶಂಕರ್ ಬಸವರಾಜ್, ಬಾಲಕಿಯರ ವಿಭಾಗದಲ್ಲಿ ಅದೇ ಶಾಲೆಯ ದೀಪಾಶ್ರೀ ಹಾಗೂ ಚೈತ್ರಶ್ರೀ ಅತ್ಯುತ್ತಮ ಕ್ರೀಡಾಪಟುಗಳಾಗಿ ಮೂಡಿಬಂದರು.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮಹಾಂತೇಶ್, ಅಂಗ್ಲ ಮಾಧ್ಯಮ ಶಾಲೆಯ ನಾಗೇಂದ್ರ ಅಣ್ಣಪ್ಪ ನಾಯ್ಕ್, ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಮಾಲಶ್ರೀ ಮುದಕಪ್ಪ ಬೆಳಗಲಿ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಯನ್ನು ಪಡೆದಿದ್ದಾರೆ.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ನೂತನ ಸಂಚಾಲಕ ಜಯಪ್ರಕಾಶ್ ಪಡಿವಾಳ್, ತಾಲೂಕು ಪಂಚಾಯಿತಿ ಸದಸ್ಯೆ ರೀಟಾ ಕುಟಿನ್ಹಾ, ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವರದರಾಯ ಕಾಮತ್, 2017ರ ಕ್ರೀಡಾಕೂಟದ ಆತಿಥ್ಯವಹಿಸಲಿರುವ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಿನ್ಸೆಂಟ್ ಡಿ’ಕೋಸ್ತ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನರಸಿಂಹ ಮಡಿವಾಳ್, ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಶುಪತಿಶಾಸ್ತ್ರಿ, ದೈಹಿಕ ಶಿಕ್ಷಣ ಶಿಕ್ಷಕ ಧೀರಜ್, ಮೂಡುಬಿದಿರೆಯ ವಲಯ ಸಹಶಿಕ್ಷಕ ಸಂಘದ ಅಧ್ಯಕ್ಷ ವಸಂತ ದೇವಾಡಿಗ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಉಪಸ್ಥಿತರಿದ್ದರು.
ಮೂಡುಬಿದಿರೆ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.
ಆಳ್ವಾಸ್‍ನಿಂದ 14 ಕೂಟ ದಾಖಲೆ:
ಆಳ್ವಾಸ್ ಪ್ರೌಢಶಾಲೆಯ ರಾಜ್ ಸೋಪಾನ ದತ್ತ್ 200ಮೀ, 600ಮೀ, 400ಮೀ. ಓಟದಲ್ಲಿ, ಶ್ರೀನಿವಾಸ್ ಶಾಟ್‍ಪುಟ್, ಚಕ್ರ ಎಸೆತ, ನಾಗೇಂದ್ರ ಅಣ್ಣಪ್ಪ ಗುಂಡು ಎಸೆತ, ಚಕ್ರ ಎಸೆತ, ಸೃಷ್ಠಿ -ಗುಂಡು ಎಸೆತ, ಮಹಾಂತೇಶ್-100ಮೀ. 200ಮೀ ಓಟದಲ್ಲಿ, ರಾಹುಲ್, 100ಮೀ, 200ಮೀ ಓಟದಲ್ಲಿ ಹಾಗೂ ಪೂಜಾ ಜವಲಿನ್ ತ್ರೋನಲ್ಲಿ ಕೂಟ ದಾಖಲೆ ಮಾಡುವ ಮೂಲಕ ಒಟ್ಟು 12 ವೈಯಕ್ತಿಕ ಕೂಟದಾಖಲೆಗಳಾಗಿವೆ. 17 ವರ್ಷದೊಳಗಿನ ಬಾಲಕಿಯ ಹಾಗೂ ಬಾಲಕರ ವಿಭಾಗದ ರಿಲೇಯಲ್ಲೂ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು ಕೂಟ ದಾಖಲೆ ಮಾಡಿದ್ದಾರೆ.

