ಮೂಡುಬಿದಿರೆ: ಮಂಗಳೂರು ತಾಲೂಕು ಮಟ್ಟದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಮಾಜ ಮಂದಿರದ ಸಭಾಭವನದಲ್ಲಿ ನೆರವೇರಿತು. ಬೆಳ್ತಂಗಡಿ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ದೇವಿಪ್ರಸಾದ್ ಬೊಳ್ಮ ಮತ್ತು ಕಾರ್ಕಳ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಸೈಫುಲ್ಲ್ ನಲ್ಲೂರು ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು: ಮಂಗಳೂರು ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷೆಯಾಗಿ ಪುಷ್ಪಲತಾ ಮುಚ್ಚೂರು, ಪ್ರಶಾಂತ್ ನೆಲ್ಲಿಕಾರು, ರೇವತಿ, ಇರ್ಶಾದ್ ಗುರುಪುರ, ಅಶ್ರಫ್ ಕೀಣ್ಯ, ಸೌಮ್ಯ ಬಾಳ(ಉಪಾಧ್ಯಕ್ಷರು), ರಾಕೇಶ್ ತೆಂಕಮಿಜಾರು( ಕಾರ್ಯದರ್ಶಿ), ಯಶೋಧ ಮುಚ್ಚೂರು, ಕಿಶೋರ್ ಪಡುಮಾರ್ನಾಡು( ಜೊತೆ ಕಾರ್ಯದರ್ಶಿ), ಯಶೋಧರ ಬೆದ್ರ ಕೋಶಾಧಿಕಾರಿಯಾಗಿ ಆಯ್ಕೆಯಾದರು.

