ಬಂಟ್ವಾಳ: ಅಯ್ಯಪ್ಪ ವೃತ್ತಧಾರಿ ಬೆಂಗಳೂರಿನ ವರದರಾಜ ಗುರುಸ್ವಾಮಿಯವರ ಶ್ರದ್ದಾಂಜಲಿಯ ಪ್ರಯುಕ್ತ ಅವರ ಭಕ್ರವೃಂದದಿಂದ ಅಕ್ಕಿ ವಿತರಣಾ ಕಾರ್ಯಕ್ರಮ ಗುರುವಾರ ಬೋಳಂತೂರಿನ ತುಳಸಿವನ ಸಿದ್ದಿವಿನಾಯಕ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

btw_nov3

ಈ ಸಂಬಂಧ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಬಂಟ್ವಾಳ ಎಪಿಎಂಸಿ ಮಾಜಿ ಅಧ್ಯಕ್ಷ ನೇಮಿರಾಜ ಶೆಟ್ಟಿ, ವಿಶ್ವಸ್ಥ ಮಂಡಳಿ ಅಧ್ಯಕ್ಷ ವೆಂಕಟರಮಣ ಬಳ್ಕೂರಾಯ, ನಿವೃತ್ತ ಶಿಕ್ಷಕ ಶಂಕರ ವಿ. ಪ್ರಮುಖರಾದ ಮುತ್ತಪ್ಪ ಮೂಲ್ಯ, ಸಿದ್ದಿ ವಿನಾಯಕ ಭಜನ ಮಂದಿರದ ಅಧ್ಯಕ್ಷ ಸಂಕಪ್ಪ ಮೂಲ್ಯ, ಸದಸ್ಯ ಭಾಸ್ಕರ ಕಯ್ಯ, ಉದಯ ಕುಮಾರ್ ತುಳಸೀವನ, ನಾರಯಾಣ ಮೂಲ್ಯ ಹಾಜರಿದ್ದು ಸಂತಾಪ ಸೂಚಿಸಿದರು. ಬಳಿಕ ಸ್ಥಳೀಯ ಬಡವರ್ಗದ ಜನರಿಗೆ ತಲಾ 25 ಕೆ.ಜಿ.ಯಂತೆ ಅಕ್ಕಿಯನ್ನು ಅತಿಥಿಗಳು ವಿತರಿಸಿದರು.

ಗುರುಸ್ವಾಮಿಯವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದರೂ ಅಯ್ಯಪ್ಪ ವೃತ್ತಧಾರಿಗಳಾದ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿ ಗುರುಸ್ವಾಮಿಯಾಗಿ ಎಲ್ಲಾ ಅಯ್ಯಪ್ಪ ವೃತಧಾರಿಗಳಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಅಗಲುವಿಕೆ ನೋವು ಉಂಟುಮಾಡಿದ್ದು ಅವರ ಸಂಸ್ಮರಣೆಯಾಗಿ ಭಕ್ತವೃಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು. ಧನು ಕುಲಾಲ್ ಬೋಳಂತೂರು ಸ್ವಾಗತಿಸಿ, ರವೀಶ್ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *