ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹವ್ಯಾಸಿ ಯಕ್ಷಬಳಗ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 10-30 ರಿಂದ ಸಂಜೆ 6-30 ರ ತನಕ, ಶಾಂಭವಿ ವಿಜಯ ಮತ್ತು ವಾಲಿ ಮೋಕ್ಷ ಎಂಬ ಯಕ್ಷಗಾನ ತಾಳ ಮದ್ದಳೆ ನಡೆಯಿತು.

a-44

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನೀರ್ಕಜೆ ಈಶ್ವರ ಭಟ್ ರವರನ್ನು ಹವ್ಯಾಸಿ ಯಕ್ಷ ಬಳಗದ ವತಿಯಿಂದ ಸನ್ಮಾನಿಸಲಾಯಿತು. ವಿಟ್ಲ ಅರಮನೆಯ ಅರಸರಾದ ಜನಾರ್ಧನ ವರ್ಮ ಅರಸರು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ವಿ ಸುದರ್ಶನ ಪಡಿಯಾರ್, ಯಕ್ಷಗಾನ ಕಲಾವಿದರುಗಳಾದ ಪಕಳಕುಂಜ ಶ್ಯಾಂ ಭಟ್, ಗಣೇಶ್ ಕುದ್ದುಪದವು, ಜಗನ್ನಾಥ ಪುಣಚ, ಯಕ್ಷ ಬಳಗದ ಸದಸ್ಯರುಗಳಾದ ಮೋನಪ್ಪ ಸೇರಾಜೆ, ಕುಮಾರ ಆಚಾರ್ಯ ವಿಟ್ಲ ಮತ್ತು ವಸಂತ ಕುಲಾಲ್ ಉಪಸ್ಥಿತರಿದ್ದರು. ಚಣಿಲ ಸುಬ್ರಹ್ಮಣ್ಯ ಭಟ್ ಸನ್ಮಾನಿತರ ಬಗ್ಗೆ ಮಾತಾಡಿದರು. ಪೂರ್ಲಪ್ಪಾಡಿ ಈಶ್ವರ ಭಟ್ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *