ಬಂಟ್ವಾಳ: “ಕನ್ನಡ ಪ್ರೇಮಿಗಳು ಕನ್ನಡಕ್ಕಾಗಿ ಹೋರಾಡಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದ್ದಾರೆ. ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸುತ್ತಾ , ಕನ್ನಡವನ್ನು ಉಳಿಸಿ ಬೆಳೆಸೋಣ” ಎಂದು ನಿವೃತ್ತ ಕನ್ನಡ ಅಧ್ಯಾಪಕ ಹಾಗೂ ಹಿರಿಯ ಪತ್ರಕರ್ತರೂ ಆದ ಜಯಾನಂದ ಪೆರಾಜೆಯವರು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬಿಸಿಯೂಟದ ಯೋಜನೆಗೆ ಪುಷ್ಪಲತಾ ಎಸ್ ನಾೈಕ್ ರವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಶಾಲಾ ಆಡಳಿತಾಧಿಕಾರಿ ಸಿ.ಶ್ರೀಧರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾಧ್ಯಕ್ಷರಾದ ಪ್ರಹ್ಲಾದ್ .ಜೆ .ಶೆಟ್ಟಿಯವರು “ವಿದ್ಯಾರ್ಥಿಗಳಿಗೆ ಅತೀ ಕಡಿಮೆ ದರದಲ್ಲಿ ಪೌಷ್ಟಿಕಾಂಶಯುಕ್ತ ಬಿಸಿಯೂಟ ನೀಡುವುದೇ ಯೋಜನೆಯ ಉದ್ದೇಶ” ಎಂದರು. ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷೆ ನಿವೃತ್ತ ಶಿಕ್ಷಕಿಯಾದ ಲಕ್ಷ್ಮೀಯವರು ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ರಾಜ್ಯೋತ್ಸವದ ಮಹತ್ವವನ್ನು ತಮ್ಮ ಹಾಡು ಹಾಗೂ ಭಾಷಣದ ಮೂಲಕ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಬಿ.ಎಸ್. ನಾೈಕ್ , ಉಪಾಧ್ಯಕ್ಷರಾದ ಅಪ್ರಾಯ ಪೈ , ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ , ಮುಖ್ಯೋಪಾಧ್ಯಾಯಿನಿಯರಾದ , ವಿಜಯಲಕ್ಷ್ಮಿ .ವಿ.ಶೆಟ್ಟಿ , ಗ್ರೇಸ್ .ಪಿ. ಸಲ್ಡಾನಾ ಹಾಗೂ ಹಳೇ ವಿಧ್ಯಾರ್ಥಿಸಂಘದ ಅಧ್ಯಕ್ಷ ಮಹೇಶ್ .ಜೆ.ಶೆಟ್ಟಿ ಉಪಸ್ಥಿತರಿದ್ದರು . ಅಂದಿನ ಭೋಜನ ವೆಚ್ಚವನ್ನು ಡಾ. ಮನೋಹರ್ ರೈ ಯವರು ವಹಿಸಿದ್ದರು . ಶಿಕ್ಷಕಿಯರಾದ ಸುಧಾ ಎನ್.ರಾವ್ ಸ್ವಾಗತಿಸಿ , ಹರಿಣಾಕ್ಷಿ ವಂದಿಸಿದರು ಯಜ್ಞೇಶ್ವರಿ . ಎಸ್ ಶೆಟ್ಟಿಯವರು ಕಾರ್ಯಕ್ರಮ ನಿರ್ವಹಿಸಿದರು.

