ಮೂಡುಬಿದಿರೆ: 61ನೇ ಕನ್ನಡ ರಾಜ್ಯೋತ್ಸವದಂಗವಾಗಿ ಮಿಜಾರು ಬೈತರಿ ಗೋಪಾಲಕೃಷ್ಣ ದೇವಸ್ಥಾನದ ಎದುರುಗಡೆ ಇರುವ ಕ್ಯಾಂಟೀನ್‍ನಲ್ಲಿ ಸಾರ್ವಜನಿಕರಿಗೆ ರಾಜ್ಯೋತ್ಸವದ ದಿನ ಉಚಿತವಾಗಿ ಚಾ-ತಿಂಡಿ, ಮೂಲಕ ತನ್ನ ಕನ್ನಡ ಪ್ರೇಮವನ್ನು ವ್ಯಕ್ತ ಪಡಿಸಿದ್ದಾರೆ.

mbd_nov-1-2

mbd_nov-14

ಈ ರೀತಿಯಲ್ಲಿ ಕನ್ನಡಾಭಿಮಾನವನ್ನು ಮೆರೆದ ವ್ಯಕ್ತಿ 57 ವರ್ಷದ ರಘುವೀರ ಮಿಜಾರು. ರಘುವೀರ ಅವರು ಕಳೆದ 20 ವರ್ಷಗಳಿಂದ ಮಿಜಾರು ದೇವಸ್ಥಾನದ ಬಳಿ ಕ್ಯಾಂಟೀನ್ ನಡೆಸಿಕೊಂಡು ಬರುತ್ತಿದ್ದು ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ತನ್ನ ಕ್ಯಾಂಟೀನ್‍ಗೆ ಆಗಮಸಿದ್ದ ಪ್ರತಿಯೋರ್ವ ಗ್ರಾಹಕನಿಗೂ ಉಚಿತವಾಗಿ ಚಾ-ತಿಂಡಿಯನ್ನು ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *