ಬಂಟ್ವಾಳ: ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು ಇದರ ತಾಲೂಕು ಶಾಖೆಯನ್ನು ತೆರೆಯುವ ಬಗ್ಗೆ ಕ.ರಾ.ಸ.ನೌ. ಸಂಘದ ಕಛೇರಿಯಲ್ಲಿ ಸಭೆ ನಡೆಯಿತು.

sabhe

ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಕಮಾಂಡೆಂಟ್ ಗಡಿ ಭದ್ರತಾ ಪಡೆ ಚಂದಪ್ಪ ಮೂಲ್ಯ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಜಾತಿ ಭಾಂದವರನ್ನು ಸಶಕ್ತಗೊಳಿಸಿ, ಅವರ ಮಕ್ಕಳಿಗೆ ಭವಿಷ್ಯ ರೂಪಿಸಲು ಸಂಘ ಸ್ಥಾಪನೆಯಾಗಿದೆ. ತಾವೆಲ್ಲರೂ ಸದಸ್ಯರಾಗುವ ಮೂಲಕ ಸಂಘವನ್ನು ಬಲಪಡಿಸೋಣ ಎಂದರು.

ಈ ಸಂದರ್ಭ ಸಂಘದ ರಾಜ್ಯ ನಿರ್ದೇಶಕರಾದ ಆನಂದ ಬಂಜನ್, ಸಂಘದ ರಾಜ್ಯ ಅಧ್ಯಕ್ಷರಾದ ಆರ್. ಶ್ರೀನಿವಾಸ,ಜಿ. ಉಪಾಧ್ಯಕ್ಷ ಜಯರಾಜ ಪ್ರಕಾಶ್, ಟಿ. ಶೇಷಪ್ಪ, ಕಾರ್ಯದರ್ಶಿ ವಿಶ್ವನಾಥ, ತಾ. ನಿರ್ದೇಶಕ ರವಿಚಂದ್ರ, ಭಾರತಿ ಶೇಸಪ್ಪ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *