ಬಂಟ್ವಾಳ : ಕಳೆದ 23 ವರ್ಷಗಳಿಂದ ಕೀಲು ಕುದುರೆಯಲ್ಲಿ ರಾಜ ವೇಷಧಾರಿಯಾಗಿ ಕಲಾಸೇವೆಗೈಯ್ಯುತ್ತಿರುವ ಅಪೂರ್ವ ಕಲಾವಿದ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವದ ಗೋಪಾಲಕೃಷ್ಣ ಬಂಗೇರ ಅವರು ಲಲಿತ ಕಲಾ ಸೇವೆಗಾಗಿ ಪ್ರಸಕ್ತ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು.

gopala-krishna-11

ಸಂಸದ ನಳಿನ್ ಕುಮಾರ್ ಕಟೀಲ್,ವಿಧಾನ ಪರಿಷತ್ ಸದಸ್ಯರಾದ ಕ್ಯಾ|ಗಣೇಶ್ ಕಾರ್ಣಿಕ್, ಐವನ್ ಡಿಸೋಜ,ಶಾಸಕರಾದ ಮೊೈದಿನ್ ಬಾವಾ, ಜೆ.ಆರ್.ಲೋಬೊ,ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಕ.ಸಾ.ಪ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಕುಮಾರ್, ಕೃಪಾ ಅಮರ್ ಆಳ್ವ, ಮತ್ತಿತರರು ಉಪಸ್ಥಿತರಿದ್ದರು. ಕಾವಳಪಡೂರು ಗ್ರಾ.ಪಂ.ಸದಸ್ಯ ಚಂದ್ರಶೇಖರ ಕರ್ಣ, ಗ್ರಾಮ ಕರಣಿಕ ಲಿಂಗಪ್ಪ, ಪ್ರಮುಖರಾದ ಸದಾಶಿವ ಅಮೀನ್, ಮಹಮ್ಮದ್ ಶರೀಫ್ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *