ವಿಟ್ಲ: ಎಸ್ ಕೆ ಎಸ್ ಎಸ್ ಎಫ್ ವಿಟ್ಲ ವಲಯ ಸಹಚಾರಿ ಸೆಂಟರ್ ಇದರ ವತಿಯಿಂದ ವಿಟ್ಲ ಸಮುದಾಯ ಆಸ್ಪತ್ರೆಗೆ ನೆಬ್ಲೈಝರ್ ಮಿಷನನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಶಾಂತ್, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಕೌನ್ಸಿಲರ್ ಶೆರೀಫ್ ಮೂಸಾ ಕುದ್ದುಪದವು, ಅಧ್ಯಕ್ಷ ಅಶ್ರಫ್ ಕಬಕ, ಕಾರ್ಯದರ್ಶಿ ಸಿ ಹೆಚ್ ಇಬ್ರಾಹಿಂ ಮುಸ್ಲಿಯಾರ್, ಪದಾಧಿಕಾರಿಗಳಾದ ವಿ ಎಸ್ ಇಬ್ರಾಹಿಂ, ಅಬ್ದುಲ್ಲ ಹಾಜಿ, ಸೆಮೀರ್ ಪಳಿಕೆ, ಪಿ ಎಂ ಹಕೀಮ್, ಕ್ಲಸ್ಟರ್ ಅಧ್ಯಕ್ಷ ಇಬ್ರಾಹಿಂ ಝೈನಿ, ಕಾರ್ಯದರ್ಶಿ ಇಸ್ಮಾಯಿಲ್ ಹನೀಫಿ ಸದಸ್ಯರುಗಳಾದ ಕೆ ಎ ಹಸೈನಾರ್ ಮುಸ್ಲಿಯಾರ್ ಮತ್ತು ಬಿ ಎಂ ಅಲೀ ಮೌಲವಿ ಉಪಸ್ಥಿತರಿದ್ದರು. ನಂತರ ಆಸ್ಪತ್ರೆಯನ್ನು ಎಲ್ಲಾ ಒಳ ರೋಗಿಗಳಿಗೆ ಸಂಸ್ಥೆಯ ವತಿಯಿಂದ ಹಣ್ಣು ಹಂಪಲು ನೀಡಲಾಯಿತು.

