ಮೂಡುಬಿದಿರೆ: ನ್ಯಾಯಾಲಯದ ತೀರ್ಪಿನಂತೆ ವಿವಿಧ ಆರೋಪಗಳಿಂದ ಮುಕ್ತರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನ್ಯಾಯಾಂಗ ಹೋರಾಟಕ್ಕೆ ಲಭಿಸಿರುವ ವಿಜಯಕ್ಕೆ ಮೂಡಬಿದಿರೆ ಬಿಜೆಪಿ ಮುಂದಾಳುಗಳು, ಕಾರ್ಯಕರ್ತರು ಬಸ್‍ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

mbd_9-1

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯ್ಲಸ್ ಡಿ’ಸೋಜ, ಪುರಸಭಾ ಸದಸ್ಯ, ಬಿಜೆಪಿ ಮಂಡಲ ಉಪಾಧ್ಯಕ್ಷ ನಾಗರಾಜ ಪೂಜಾರಿ, ದಿನೇಶ್ ಪೂಜಾರಿ ತಿರುಮಲಬೆಟ್ಟು, ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ರಾಜೇಶ್ ಮಲ್ಯ,ದೇವೀಪ್ರಸಾದ್ ಶೆಟ್ಟಿ, ಕಿಶೋರ್ ಕುಮಾರ್, ಶಶಿಕಿರಣ್, ಲಕ್ಷ್ಮಣ್ ಪೂಜಾರಿ, ಅಮರಕೋಟೆ, ಗೋಪಾಲ ಶೆಟ್ಟಿಗಾರ್, ಲಕ್ಷ್ಮೀಶ, ಹರೀಶ್ ಎಂ.ಕೆ. ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *