ಮೂಡುಬಿದಿರೆ: ಇಲ್ಲಿನ ಸಾಂಪ್ರದಾಯಿಕ ಸಂಗೀತ ಜನಪದ ವಾದ್ಯ ಸಂಘದ 4ನೇ ವರ್ಷದ ವರ್ಷದ ಮಹಾಸಭೆ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಿತು.

vadhya

ಉದ್ಯಮಿ ಶ್ರೀಪತಿ ಭಟ್ ಸಮಾರಂಭವನ್ನು ಉದ್ಘಾಟಿಸಿ, ಪ್ರಾಚೀನ ಕಾಲದಿಂದಲೂ ಮನುಷ್ಯನ ಜೀವನದ ಅವಿಭಾಜ್ಯ ಅಂಗಾವಾಗಿರುವ ಸಂಗೀತಕ್ಕೆ ಸಕಲ ಜೀವರಾಶಿಗಳು ಮಿಡಿಯುತ್ತದೆ. ವಾದ್ಯ ವಾದನವು ದೇಶದ ವಿವಿಧ ಪ್ರದೇಶಗಳಲ್ಲಿ ವಿಭಿನ್ನವಾಗಿದ್ದರು ಸಭೆ ಸಮಾರಂಭಗಳಿಗೆ ತನ್ನದೇ ರೀತಿಯಲ್ಲಿ ಮೆರಗು ನೀಡುತ್ತದೆ. ಹಿರಿಯ ಕಲಾವಿದರನ್ನು ಗುರುತಿಸಿ ಗೌರವಿಸುವುದರ ಮೂಲಕ ಯುವ ಕಲಾವಿದರಿಗೆ ಪ್ರೇರಣೆಯಾಗುತ್ತದೆ ಎಂದರು. ಶ್ರೀ ಕ್ಷೇತ್ರ ಕುಡುಪು ಅರ್ಚಕ ಕೃಷ್ಣರಾಜ ತಂತ್ರಿ ಆಶೀರ್ವಚನ ನೀಡಿದರು.

ಸಾಂಪ್ರದಾಯಿಕ ವಾದ್ಯ ಸಂಗೀತದ ಹಿರಿಯ ಕಲಾವಿದರಾದ ಸದಾಶಿವ ಶೇರಿಗಾರ್, ಕಳುವಾರು ಬಜ್ಪೆ ಹಾಗೂ ದೂಜ ಕೋಟ್ಯಾನ್ ಕಲ್ಲಮೂಂಡ್ಕೂರು ಅವರನ್ನು ಸನ್ಮಾನಿಸಲಾಯಿತು.  ಸಂಘದ ಗೌರವಾಧ್ಯಕ್ಷೆ ಶ್ವೇತಾ ಜೈನ್ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯ ಕೊರಗಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಎಂ.ಮುಖ್ಯ ಅತಿಥಿಯಾಗಿದ್ದರು.

ಸಂಘದ ಅಧ್ಯಕ್ಷ ಕೇಶವ ಶೆಟ್ಟಿಗಾರ್, ಕಾರ್ಯದರ್ಶಿ ಗಂಗಾಧರ್ ಎಡಪದವು, ಜೊತೆ ಕಾರ್ಯದರ್ಶಿ ಗಣೇಶ್ ಬೆಳುವಾಯಿ, ಕೋಶಾಧಿಕಾರಿ ಸುರೇಶ್ ಕಡಂದಲೆ, ಉಪಾಧ್ಯಕ್ಷರಾದ ಅಣ್ಣಿ ಸುವರ್ಣ, ರಘುನಾಥ್ ಎಮ್, ಕೇಶವ ಸದಸ್ಯರು ಉಪಸ್ಥಿತರಿದ್ದರು. ನಿತೇಶ್ ಬಲ್ಲಾಳ್ ಕಾರ್ಯಕ್ರಮವನ್ನು ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *