ಉಡುಪಿ: ಉಪ್ಪೂರು ಸೇತುವೆಯಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಿಯಕರ ಮತ್ತು ಇತರ ಇಬ್ಬರು ಯುವಕರು ಕಾರಣ ಎಂದು ಯುವತಿಯ ತಂದೆ ದೂರು ನೀಡಿದ್ದಾರೆ.

chaitra-05-1475665579

ಸೆಪ್ಟೆಂಬರ್ 28ರಂದು ಪವನ್ ಮತ್ತು ಸಾಗರ್ ಎಂಬವರು ಆಕೆಯನ್ನು ಎಲ್ಲೋ ಕರೆದುಕೊಂಡು ಹೋಗಿ ಮತ್ತೆ ಸಂಜೆ ತಂದು ಬಿಟ್ಟಿದ್ದರು.ಆದರ್ಶ, ಪವನ್ ಮತ್ತು ಸಾಗರ್ ಸೇರಿಕೊಂಡು ಆಕೆ ಮೇಲೆ ಯಾವುದೋ ದುಷ್ಕೃತ್ಯವೆಸಗಿರಬೇಕು. ಈ ಕಾರಣದಿಂದ ಆಕೆ ಸಂಜೆ ಉಪ್ಪೂರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಉಡುಪಿಯ ಪುತ್ತೂರು ಗ್ರಾಮ ಸುಬ್ರಹ್ಮಣ್ಯ ನಗರ ಲಿಂಗೋಟಿಗುಡ್ಡೆ ಚಂದ್ರಶೇಖರ್ ದೂರು ನೀಡಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವರ ಮಗಳು ಚೈತ್ರಾ ಸೆಪ್ಟೆಂಬರ್ 28ರಂದು ಸಂಜೆ ನದಿಗೆ ಹಾರಿದ್ದು, ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿತ್ತು. ಅಂಬಲಪಾಡಿ ಮಾಂಡವಿ ಟವರ್ಸ್ ನಲ್ಲಿರುವ ನೆಟ್ ಐ ಎಂಬ ಕಂಪ್ಯೂಟರ್ ಸೆಂಟರ್‌ನಲ್ಲಿ ಚೈತ್ರಾ ಕೆಲಸ ಮಾಡುತ್ತಿದ್ದ ಈಕೆ ಆದರ್ಶ ಎಂಬ ಯುವಕನನ್ನು ಆಕೆ ಪ್ರೀತಿಸುತ್ತಿದ್ದು, ಆತ ಮನೆಗೂ ಬಂದು ಹೋಗುತ್ತಿದ್ದ.

By suddi9

Leave a Reply

Your email address will not be published. Required fields are marked *