ಮೂಡುಬಿದಿರೆ: ರಾಷ್ಟ್ರಮಟ್ಟದಲ್ಲಿ ಸಂಚಲನ ಮೂಡಿಸಿದ ಹಿಂದೂ ಸಂಘಟನೆ ಕಾರ್ಯಕರ್ತ, ಹೂವಿನ ವ್ಯಾಪಾರಿ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಅಕ್ಟೋಬರ್ 9ಕ್ಕೆ ಒಂದು ವರ್ಷ. ಆದರೆ ಕೊಲೆಗೆ ನೈಜ್ಯ ಕಾರಣ ಮಾತ್ರ ಇನ್ನೂ ನಿಗೂಡ. 17 ಆರೋಪಿಗಳನ್ನು ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಪ್ರಬಲ ಸಾಕ್ಷಿ ಇಲ್ಲದೇ ಪ್ರಕರಣ ಬಿದ್ದು ಹೋಗುವ ಹಂತದಲ್ಲಿದೆ.

8-mood-prashanth-murder

ಮೂಡುಬಿದಿರೆ ಬಸ್ ನಿಲ್ದಾಣ ಬಳಿ ಹೂವಿನ ವ್ಯಾಪಾರಿಯಾಗಿರುವ ಹೊಸಬೆಟ್ಟು ಗ್ರಾಮದ ಬಿರಾವು ನಿವಾಸಿ ಆನಂದ ಪೂಜಾರಿಯವರ ಪುತ್ರ ಪ್ರಶಾಂತ್ ಪೂಜಾರಿ, ತಂದೆಯೊಂದಿಗೆ ಹಲವು ವರ್ಷ ಹೂವಿನ ವ್ಯಾಪಾರದಲ್ಲಿ ತೊಡಗಿದ್ದರು. ಮೂಡುಬಿದಿರೆ ಗಂಟಾಲ್ಕಟೆ ಸಹಿತ ವಿವಿಧ ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ, ಅಕ್ರಮ ಗೋ ಸಾಗಾಟ ವಾಹನಗಳನ್ನು ತಡೆದಿರುವುದು ಸಹಿತ ವಿವಿಧ ಚಟುವಟಿಕೆಗಳಿಂದ ಹಿಂದೂ ಸಂಘಟನೆ ಸಕ್ರಿಯ ಕಾರ್ಯಕರ್ತನಾಗಿ, ಗೋರಕ್ಷೆ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ. 2015ರ ಅಕ್ಟೋಬರ್ 9ರಂದು ಬೆಳಗ್ಗೆ ಎಂದಿನಂತೆ ತನ್ನ ಹೂವಿನ ಅಂಗಡಿಗೆ ನೀರು ತರುತ್ತಿರುವ ಸಂದರ್ಭ ಮೂರು ಬೈಕಿನಲ್ಲಿ ಬಂದ ಆರು ಜನ ಮೂರು ಮಂದಿ ಇಳಿದು ಮರಕಾಯುಧಗಳಿಂದ ಪ್ರಶಾಂತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಪ್ರಶಾಂತ್ ಕೊನೆಯುಸಿರೆಳೆದಿದ್ದ.

ಮೂಡುಬಿದಿರೆ ಪೇಟೆಯ ಹೃದಯಭಾಗದಲ್ಲೇ ಅದೂ ಹಾಡುಹಗಲೇ ಭೀಕರ ಹತ್ಯೆಯಿಂದ ಮೂಡುಬಿದಿರೆಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಕೊಲೆಯ ಕೆಲವೇ ಗಂಟೆಗಳಲ್ಲಿ ಸಾವಿನ ಸುದ್ದಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಲೆ ಪ್ರಕರಣ ಹಿಂದೂ ಸಂಘಟನೆಯವರನ್ನು ಆಕ್ರೋಶಿತರನ್ನಾಗಿಸಿತು. ಪ್ರಕರಣದ ತೀವ್ರತೆಗೆ ಮೂಡುಬಿದಿರೆಯಲ್ಲಿ ಮೂರು ದಿನ ಬಂದ್ ಆಚರಿಸಿದ್ದು ವಿವಿಧ ಮಠಗಳ ಮಠಾಧೀಶರು, ಧಾರ್ಮಿಕ ಮುಖಂಡರು, ರಾಜ್ಯದ ರಾಜಕೀಯ ಮುಖಂಡರು ಪ್ರಶಾಂತ್ ಮನೆಗೆ ಬಂದು ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಕೊಲೆ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ಕಾರಣವೆಂದು ಬಿಜೆಪಿಯ ರಾಜ್ಯ ಮುಖಂಡರ ಪ್ರತಿಭಟನೆಗೆ ಮುಂದಾಗಿದ್ದರು. ಆತಂಕದ ನಡುವೆ ಆಕ್ರೋಶವೂ ತೀವ್ರವಾಗಿದ್ದ ಕಾರಣ ಪ್ರಕರಣ ಕೆಲವು ದಿನಗಳಲ್ಲಿ ಹೆಚ್ಚು ಸಂಚಲನವನ್ನು ಉಂಟು ಮಾಡಿತ್ತು. ಮೂಡುಬಿದಿರೆ ಶಾಸಕ(ಅಂದು ಸಚಿವ) ಕೆ.ಅಭಯಚಂದ್ರ ಜೈನ್ ಅವರಿಗೆ ಡಾನ್ ರವಿಪೂಜಾರಿಯಿಂದ ಬೆದರಿಕೆ ನೀಡಿದ್ದಾರೆ ಎನ್ನಲಾಗಿರುವ ಪ್ರಕರಣ ಸಹಿತ ಪ್ರಶಾಂತ್ ಕೊಲೆ ಪ್ರಕರಣಕ್ಕೆ ಪೂರಕವಾಗಿ ಕೆಲವು ವಿದ್ಯಾಮಾನಗಳು ಕೂಡ ನಡೆದಿತ್ತು.

ಪ್ರಶಾಂತ್ ಕೊಲೆ ನಡೆದು ಹತ್ತು ದಿನಗಳೊಳಗಡೆ ಮೊದಲು ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಅಮೇಲೆ ಕೆಲವೇ ತಿಂಗಳಲ್ಲಿ ಮತ್ತಷ್ಟು ಆರೋಪಿಗಳನ್ನು ಬಂಧಿಸಿದ್ದು, ಒಂದು ವರ್ಷದಲ್ಲಿ ಒಟ್ಟು 17 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳ್ಳಾಲದ ಮಹಮ್ಮದ್ ಸಿರಾಜುದ್ದೀನ್, ಮಹಮ್ಮದ್ ಮುಸ್ತಾಫ ಬಜ್ಪೆ, ಮುಸ್ತಾಫ ಕಾವೂರು, ಮಹಮ್ಮದ್ ಹನೀಫ್ ಅಡ್ಯಾರು, ಅಕ್ಬಾರ್ ವಳಲ್ ಅಡ್ಯಾರ್ ಪದವು, ಕಬೀರ್ ಕಂದಾವರ, ಮಂಗಳೂರಿನ ಮಹಮ್ಮದ್ ನವಾಜ್, ತೋಡಾರಿನ ಮಹಮ್ಮದ್ ಶರೀಫ್, ಮೂಡುಬಿದಿರೆ ಪ್ರಾಂತ್ಯದ ಮಹಮ್ಮದ್ ಇಲ್ಯಾಸ್, ಬಜ್ಪೆಯ ತಾಜುದ್ದೀನ್, ಮಹಮ್ಮದ್ ಇರ್ಷಾದ್, ಮಹಮ್ಮದ್ ಅನ್ವಾರ್, ಮಹಮ್ಮದ್ ಮುಸ್ತಾಫ, ಮಹಮ್ಮದ್ ರಶೀದ್, ಇಬ್ರಾಹಿಂ ಲಿಖಾಯತ್, ಬದ್ರುದ್ದೀನ್ ಗಂಟಾಲ್ಕಟ್ಟೆಎ, ಇಂಥಿಯಾಜ್ ಪ್ರಕರಣದ ಆರೋಪಿಗಳು. ಆರೋಪಿಗಳ ವಿರುದ್ಧ ಸೆಕ್ಷನ್ 143, 147, 148, 302, 120(ಬ)ರ/ಡ149 ಐಪಿಸಿ ದಾಖಲಿಸಲಾಗಿದೆ. ಸೆಕ್ಷನ್ ಪ್ರಕಾರ ಅಕ್ರಮ ಕೂಟದ ಸದಸ್ಯರಾಗಿರುವುದು, ದೊಂಬಿ, ಕೊಲೆ, ಕುಕೃತ್ಯಕ್ಕೆ ಸಂಚು ಪ್ರಕರಣ ಆರೋಪ 17 ಮಂದಿಗಿದೆ. 2016 ಜನವರಿ 25ರಿಂದ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭಗೊಂಡಿತ್ತು.

ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾಗಿರುವ ಮೂಡುಬಿದಿರೆಯಲ್ಲಿ ಈ ಪ್ರಕರಣ ಕೋಮು ಸೂಕ್ಷ್ಮತೆಯತ್ತ ವಾಲಿದರೂ, ಮೂಡುಬಿದಿರೆಯ ಸರ್ವಧರ್ಮದ ಪ್ರಜ್ಞಾವಂತ ನಾಗರಿಕರಿಂದ ಕೋಮುವಾದದ ಸ್ಪಶ್ರ್ಯ ತಪ್ಪಿದೆ. ಪ್ರಶಾಂತ್ ಕೊಲೆ ಪ್ರಕರಣದ ಬಳಿಕ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಪ್ರಕರಣ ನಡೆಯದಿರುವುದು ಇದಕ್ಕೊಂದು ಸ್ಪಷ್ಟ ನಿದರ್ಶನ. ಆದರೆ ಪ್ರಶಾಂತ್ ಕೊಲೆಗೆ ಸ್ಪಷ್ಟ ಕಾರಣ ಇನ್ನೂ ನಿಗೂಡವಾಗಿದೆ. ಕೊಲೆ ಪೂರ್ವಧ್ವೇಷಕ್ಕೆ ನಡೆದಿದ್ದೆ ಎನ್ನುವ ಸಂಶಯಕ್ಕೂ ಉತ್ತರ ಸಿಕ್ಕಿಲ್ಲ. ಪ್ರಬಲ ಸಾಕ್ಷಿಯ ಕೊರತೆ ಇರುವುದರಿಂದ ಈ ಪರಕರಣ ನೈಜ್ಯತೆ ಇನ್ನೂ ಬಯಲಾಗಿಲ್ಲ.

By suddi9

Leave a Reply

Your email address will not be published. Required fields are marked *