ಉಡುಪಿ: ಉಡುಪಿ ಬಸ್ ಮಾಲಕರ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯ ಎರಡನೇ ಶಾಖೆಯ ಶಿರ್ವ ಮುಖ್ಯ ರಸ್ತೆಯ ವಿನೋದ್ ಟವರ್ಸನಲ್ಲಿ ಅ.07 ರಂದು ಶುಕ್ರವಾರ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ರಾಜ್ಯಧಾರ್ಮಿಕ ಪರಿಷತ್ತಿನ ಸದಸ್ಯ ಕೇಂಜ ಶ್ರೀಧರ ತಂತ್ರಿಯವರು ಉದ್ಘಾಟಿಸಿದರು.

14639856_1190799654276924_7381745848492839823_n

ಮುಖ್ಯ ಅತಿಥಿಗಳಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ , ಜಿ.ಪಂ.ಸದಸ್ಯ ವಿಲ್ಸನ್ ರೋಡ್ರಿಗಸ್, ರಾಜ್ಯ ಸಂಯುಕ್ತ ಸಹಕಾರಿ ನಿರ್ದೆಶಕ ಭಾಸ್ಕರ ಕಾಮತ್, ಹಿರಿಯ ಸಹಕಾರಿ ಮತ್ತು ಕಟ್ಟಡದ ಮಾಲಕ ಕೆ.ವಸಂತ್ ಕಾಮತ್, ಶಿರ್ವ ಬಸ್ ಮಾಲಕರ ಸಂಘದ ಗೌರವಾದ್ಯಕ್ಷ ಸ್ಟಾನ್ಲಿ ಡಯಾಸ್, ಸಂಘದ ಉಪಾದ್ಯಕ್ಷ ಸುಧಾಕರ ಕಲ್ಮಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಹಕಾರಿಯ ಅದ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವಹಿಸಿದ್ದರು. ಸಂಘದ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ ವೈ. ಎಸ್. ರಾವ್ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *