ಕೈಕಂಬ: ಗಾಂಜಾವಾರ್ ಗೆ ಬಲಿಯಾಗಿದ್ದ ಮಾರಿಪಳ್ಳದ ಯುವಕ ನೌಷಾದ್(27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಟ್ವಾಳ ಪೊಲೀಸರು ಆರು ಮಂದಿಯನ್ನು ಸೆರೆ ಹಿಡಿದಿದ್ದು ಅದರಲ್ಲಿ ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

maripalla murder
maripalla murder

 

maripalla

maripalla (1)

maripalla (2)

maripalla (3)

 

ಬಂಧಿತರನ್ನು  ಸುಜೀರ್-ಬದಿಗುಡ್ಡೆ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ತೌಸೀಫ್(22),  ಅರ್ಕುಳ ನಿವಾಸಿ, ಇಸ್ಮಾಯಿಲ್ ಎಂಬವರ ಪುತ್ರ ಇರ್ಫಾನ್ ಯಾನೆ ಇಪ್ಪು(24), ಪುದು ನಿವಾಸಿ ಹಮೀದ್ ಎಂಬವರ ಪುತ್ರ ಮುಹಮ್ಮದ್ ನಿಸಾರ್(26), ಪೇರಿಮಾರು ನಿವಾಸಿ ಶೇಖಬ್ಬರ ಪುತ್ರ, ಮುಹಮ್ಮದ್ ನಿಸಾರ್(24), ಮಾರಿಪಳ್ಳ ನಿವಾಸಿ ದಿ.ಸುಲೇಮಾನ್ ಎಂಬವರ ಪುತ್ರ ಅಬ್ದುಲ್ ಸತ್ತಾರ್(27) ಹಾಗೂ ಪೇರಿಮಾರ್ ನಿವಾಸಿ ಅಬೂಬಕರ್ ಬಾವ ಎಂಬವರ ಪುತ್ರ ಮುಹಮ್ಮದ್ ಸಿರಾಜ್(25) ಎಂದು ಹೆಸರಿಸಲಾಗಿದೆ.

ಆರೋಪಿಗಳು ಬಂಟ್ವಾಳದ ಬಾರ್ ಒಂದರಲ್ಲಿದ್ದಾರೆಂಬ ಖಚಿತ ವರ್ತಮಾನ ಬಂಟ್ವಾಳ ಪೊಲೀಸರಿಗೆ ಲಭಿಸಿತ್ತು. ಇದರ ಜಾಡು ಹಿಡಿದ ಬಂಟ್ವಾಳ ಪೊಲೀಸರು ಆರು ಮಂದಿಯನ್ನು ಅನಾಮತ್ತಾಕಿ ಹಿಡಿದು ಕಸ್ಟಡಿಗೆ ಒಪ್ಪಿಸಿದ್ದಾರೆ.  `ನೌಚಾಷದ್ ನ ಆರ್ಭಟ ಮಿತಿ ಮೀರಿತ್ತು. ಆತ ನಮ್ಮನ್ನು ಕೊಲ್ಲುವವನಿದ್ದ. ಆತ ನಮ್ಮನ್ನು ಕೊಲ್ಲುವ ಮೊದಲೇ ನಾವೇ ಆತನನ್ನು ಮುಗಿಸಿದೆವು’ ಎಂಬ ಹೇಳಿಕೆಯನ್ನು ಾರೋಪಿಗಳು ಬಾಯ್ಬಿಟ್ಟಿದ್ದಾರೆನ್ನಲಾಗಿದೆ. ಬಂಧಿತರಿಂದ ತಲವಾರು, ರಾಡ್ ಹಾಗೂ ಇನೋವಾ ಕಾರ್ ಸ್ವಾಧೀನಪಡಿಸಿಕೊಳ್ಳಲಾಗಿದೆ.

By suddi9

Leave a Reply

Your email address will not be published. Required fields are marked *