ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಎನ್‍ಐಐಟಿ ಸಹಯೋಗದೊಂದಿಗೆ ಕಂಪ್ಯೂಟರ್ ಕೌಶಲಭಿವೃದ್ಧಿ ಕೋರ್ಸ್‍ಗೆ ಚಾಲನೆ ನೀಡಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಕೋರ್ಸ್‍ಗೆ ಚಾಲನೆ ನೀಡಿ, ಪಠ್ಯದ ಜೊತೆಗೆ ಕಂಪ್ಯೂಟರ್ ಜ್ಞಾನ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರಬೇಕು. ಅಧುನಿಕ ಜಗತ್ತಿನಲ್ಲಿ ನಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕಂಪ್ಯೂಟರ್ ಜ್ಞಾನ, ಅವುಗಳ ಬಳಕೆ ಸಹಕಾರಿ ಎಂದರು. ಮಂಗಳೂರು ಎನ್‍ಐಐಟಿ ವ್ಯವಹಾರ ಪಾಲುದಾರರಾದ ಪವಿತ್ರ ವಿಕಾಸ್, ಎಂಬಿಎ ವಿಭಾಗದ ಡೀನ್ ಪ್ರೊ. ಪಿ.ರಾಮಕರಷ್ಣ ಚಡಗ ಉಪಸ್ಥಿತರಿದ್ದರು.

