ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್‍ಡಬ್ಲ್ಯೂಸಿ ಯೋಜನೆಯಡಿಯಲ್ಲಿ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮೌಲ್ಯಮಾಪನ ಕಾರ್ಯಕ್ರಮವನ್ನು ಕುಪ್ಪೆಪದವು ಆಶಾಕಿರಣ ಹಾಲ್‍ನಲ್ಲಿ ಏರ್ಪಡಿಸಲಾಯಿತು. ಈ ಕಾರ್ಯಕ್ರಮಕ್ಕೆ ಭರತ್ ಎಸ್ ಕರ್ಕೇರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸಂಘದ ಸದಸ್ಯರಿಗೆ ಚಟುವಟಿಕೆಗಳ ಮೂಲಕ ತಮ್ಮಲ್ಲಿ ಯಾವ ರೀತಿಯ ಬದಲಾವಣೆ ಕಂಡುಕೊಳ್ಳಬಹುದು ಮತ್ತು ಸಮುದಾಯದಲ್ಲಿ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಯೋಜನೆಯ ಸಂಯೋಜಕರಾದ ವಿಲಿಯಂ ಸಾಮ್ಯುವೆಲ್‍ರವರು ಕಾರ್ಯಕ್ರಮದ ಉದ್ದೇಶ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಸಂಘದ ಸದಸ್ಯೆಯಾದ ಝರೀನಾ ಸ್ವಾಗತಿಸಿ ಪ್ರಪುಲ್ಲ ವಂದಿಸಿದರು. ವಲಯ ಸಂಯೋಜಕರಾದ ಈಶ್ವರ್ ನಾಯ್ಕ್ ಹಾಗೂ ಕಾರ್ಯಕರ್ತೆ ಸೀತಾಲಕ್ಷ್ಮೀ ಉಪಸ್ಥಿತರಿದ್ದರು.

