ಬಂಟ್ವಾಳ: ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಿದಾಗ ಪ್ರತಿಯೊಬ್ಬನೂ ಉತ್ತಮ ನಾಗರಿಕನಾಗುತ್ತಾನೆ, ತಾನು ಸ್ವಚ್ಛತೆಯ ಕಡೆಗೆ ಗಮನ ನೀಡಿ ಬೆಳೆಯುವುದರ ಜೊತೆಗೆ ತನ್ನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡುವುದರಲ್ಲಿ ತೊಡಗಿಕೊಳ್ಳುತ್ತಾನೆ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಉತ್ತಮ ಗುಣಗಳನ್ನು ತನ್ನಲ್ಲಿ ರೂಢಿಸಿಕೊಂಡು ಆದರ್ಶಪ್ರಾಯನಾಗುವಲ್ಲಿ ಸಹಕಾರಿಯಾಗುವುದು ಎಂದು ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆ ಯನ್ನು ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುವ ಮೂಲಕ ಮಜಿ ಶಾಲಾ ಮುಖ್ಯ ಶಿಕ್ಷಕರಾದ ನಾರಾಯಣ ಪೂಜಾರಿಯವರು ತಿಳಿಸಿದರು.
ದ.ಕ.ಜಿ.ಪಂ.ಹಿ.ಶಾಲೆ ಮಜಿ ವೀರಕಂಭ ಇಲ್ಲಿ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜನ್ಮ ದಿನಾಚರಣೆಯನ್ನು ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು. ಕಾರ್ಯ ಕ್ರಮದಲ್ಲಿ ಎಸ್.ಕೆ.ಪಿ.ಎ ನ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರ, ವಿಶೇಷವಾಗಿ ನಡೆಸಲಾಗುವ ಆಂಗ್ಲ ಭಾಷಾ ತರಗತಿಯ ಶಿಕ್ಷಕಿ ಶ್ರೀಮತಿ ತನುಜಾ ಹಾಜರಿದ್ದರು. ಶಿಕ್ಷಕಿ ಶಕುಂತಳಾ ಸ್ವಾಗತಿಸಿ ಶಿಕ್ಷಕಿ ಸಿಸಿಲಿಯಾ ವಂದಿಸಿದರು. ಸಂಗೀತ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಕುಮಾರಿ ಜ್ಯೋತಿ ಸಹಕರಿಸಿದರು.

