ನಟ ರಾಜಶೇಖರ್ ಆರ್.ಕೋಟ್ಯಾನ್‍ಗೆ ಅಭಿನಂದನಾ ಸನ್ಮಾನ
ಮುಂಬಯಿ, : ಬಿಲ್ಲವ ಸಂಘ ಕುವೇಯ್ಟ್ ಕಳೆದ ಶುಕ್ರವಾರ (ಸೆ.23) ಕುವೇಯ್ಟ್ ಅಲ್ಲಿನ ಕ್ಯಾಂಬ್ರಿಡ್ಜ್ ಶಾಲಾ ಸಭಾಗ್ರುಹದಲ್ಲಿ ಬಿಲ್ಲವ ಚಾವಡಿ-2016 ಸಂಭ್ರಮಿಸಿತು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಕಾರ್ಯಕಾರಿ ಸಮಿತಿ ಸದಸ್ಯ, ಮುಂಬಯಿಯಲ್ಲಿನ ತುಳು ಕನ್ನಡಿಗ ನಿರ್ಮಾಪಕ, ನಿರ್ದೇಶಕ, ನಟ ರಾಜಶೇಖರ್ ಆರ್.ಕೋಟ್ಯಾನ್ ಪ್ರಧಾನ ಅಭ್ಯಾಗತರಾಗಿದ್ದು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆಯನ್ನೀಡಿದರು.

ಗೌರವ ಅತಿಥಿಗಳಾಗಿ ಕುವೇಯ್ಟ್ ರಾಯಭಾರಿಯ ಮಾಹಿತಿ ಮತ್ತು ಸಾಂಸ್ಕೃತಿಕ ಇಲಾಖೆಯ ಮಾಧ್ಯಮ ಕಾರ್ಯದರ್ಶಿ ಎ.ಕೆ ಶ್ರೀವಾಸ್ತವ, ಸಂಜೀವ ನಾರಾಯಣ್, ಸತೀಶ್ ಶಿವಪ್ಪ ಪೂಜಾರಿ, ಹರೀಶ್ ಭಂಡಾರಿ ಉಪಸ್ಥಿತರಿದ್ದು `ಬಿಲ್ಲವ ಬೊಲ್ಪು’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ನಿರ್ದೇಶಕ, ನಟ ರಾಜಶೇಖರ್ ಆರ್.ಕೋಟ್ಯಾನ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.

kuwait-billava-chavadi-1

kuwait-billava-chavadi-2

kuwait-billava-chavadi-3-1

ಭಾರತ್ ಬ್ಯಾಂಕ್‍ನ ಸ್ವರ್ಣ ಪ್ರಾಯೋಜಕತ್ವದಲ್ಲಿ ನೆರವೇರಿದ ಭವ್ಯ, ವರ್ಣರಂಜಿತ ಕಾರ್ಯಕ್ರಮದಲ್ಲಿ ಮಂಗಳೂರಿನಿಂದ ವಿಶೇಷ ಆಮಂತ್ರಿತರಾಗಿ ರಾಕೇಶ್ ಬಿ.ಸಿ.ರೋಡ್, ನೆಲ್ಲೂ ಪೆರ್ಮಾನೂರು, ಮನೋಜ್ ಬಂಗೇರ ಉಪಸ್ಥಿತರಿದ್ದು, ಸತೀಶ್ ಕುಂದರ್ ರಚಿಸಿ ಸತೀಶ್ ಆಚಾರ್ಯ ಮತ್ತು ಪ್ರವೀಣ್ ಕೋಟ್ಯಾನ್ ನಿರ್ದೇಶಿತ `ಬಿಲ್ಲವ ಬೊಲ್ಪು’ ಸ್ಮರಣ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಿವೇದಿತಾ ರೆಡ್ಡಿ ಭರತನಾಟ್ಯವನ್ನು, ಸಂಘದ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರು ನೃತ್ಯರೂಪಕ, ಹುಲಿವೇಷ, ರೋಕ್‍ಸ್ಟಾರ್ ಡ್ಯಾನ್ಸ್ ತಂಡ ವಿವಿಧ ನೃತ್ಯಾವಳಿಗಳನ್ನು ಸಾದರ ಪಡಿಸಿದರು. ಹೇಮಾಂತ್ ಸುವರ್ಣ ಮತ್ತು ಅಶ್ವಿತಾ ಸುರೇಂದ್ರ ಪೂಜಾರಿ ಸಂಗೀತ ನೀಡಿ ಮನರಂಜಿಸಿದರು.

ಕಾವ್ಯ ಪ್ರಶಾಂತ್ ಪ್ರಾರ್ಥನೆಯನ್ನಾಡಿದರು. ಅಧ್ಯಕ್ಷ ಚಿತ್ರೇಕ್ ಬಂಗೇರ ಸ್ವಾಗತಿಸಿದರು. ಸತೀಶ್ ಕುಂದರ್, ಹೇಮಂತ್ ಸುವರ್ಣ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಮಿಥುನ್ ವಿಶ್ವನಾಥ್ ಸಂಘಟನೆಯಲ್ಲಿ ನಡೆದ ಸಂಭ್ರಮದಲ್ಲಿ ಅಶ್ವಿತಾ ಸುರೇಂದ್ರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುಷ್ಮಾ ಬಂಗೇರ ಧನ್ಯವಾದಗೈದರು.

By suddi9

Leave a Reply

Your email address will not be published. Required fields are marked *