ಈ ದೇವಸ್ಥಾನದ ಸ್ಥಾಪನೆಯ ಬಗ್ಗೆ ತಿಳಿದು ಬರುವುದಿಲ್ಲ. ಇದು ವಿಜಯನಗರ ಅರಸರ ಆಳ್ವಿಕೆಗಳಿಂತಲೂ ಹಿಂದೆ ಇತ್ತು ಎಂದು ನಂಬಲಾಗಿದೆ. ಈ ದೇವಸ್ಥಾನವು ಕಾರ್ಕಳ ಬಸ್ ನಿಲ್ದಾಣಕ್ಕೆ ಅತೀ ಸಮೀಪದಲ್ಲಿದೆ. ಈ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ಜಾತ್ರೆ ಎರಡು ದಿನಗಳವರೆಗೆ ನಡೆಯುತ್ತದೆ. ಪ್ರತೀ ವರ್ಷವೂ ನವರಾತ್ರಿಯನ್ನು ಆಚರಿಸಲಾಗುತ್ತದೆ. ನವರಾತ್ರಿಯಲ್ಲಿ ಬರು ಮಂಗಳವಾರದಂದು ಚಂಡಿಕಾಯಾಗವು ನಡೆಯುತ್ತದೆ.

img-20161003-wa0010

ಕಾರ್ಕಳದ ಮಾರಿಜಾತ್ರೆ ಸಮಯದಲ್ಲಿ ದೇವಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಿ ಮೂರು ಮಾರ್ಗದ ಅಂಗಡಿಯೊಂದರ ಒಳಗೆ ಇರುವ ಕಟ್ಟೆಯಲ್ಲಿ ಕೂರಿಸಿ ಪೂಜಾದಿಗಳನ್ನು ನಡೆಸುತ್ತಾರೆ. ಇದು ಬಹಳ ಅನಾದಿ ಕಾಲದಿಂದ ನಡೆದು ಬಂದ ಸಂದಾಯವೆಂದು ಕಾಣುತ್ತದೆ.ಕಾರಣ ದೇವಿಯೂ ಕುಳಿತುಕೊಳ್ಳುವ ಕಟ್ಟೆಯಲ್ಲಿ ಹೊಯ್ಸಳರ ಕಾಲದ ಒಂದು ಅಸ್ಪಷ್ಟ ಶಾಸನ ಇದೆ. ಎತ್ತರದ ಪಂಚಾಂಗದ ಮೇಲೆ ಸಾಕಷ್ಟು ಎತ್ತರವಾಗಿಯೇ ಕಟ್ಟಿರುವುದರಿಂದ ಜನದಟ್ಟನೆ ಸಮಯದಲ್ಲಿ ಅತಿ ದೂರದಿಂದಲೂ ದೇವಿದರ್ಶನ ಸುಲಭ ಸಾಧ್ಯವಿದೆ. ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ದರ್ಶನ ನಡೆಯುತ್ತದೆ. ಮುಖ್ಯಪ್ರಾಣ ಹಾಗೂ ಉಚ್ಚಂಗಿ ಇಲ್ಲಿಯ ಉಪದೇವತೆಗಳು ಭೂತದ ಗುಡಿಯೂ ಇದೆ.

ಮಾರಿಗುಡಿಯ ಹಿಂಭಾಗಕ್ಕಿರುವ ಕಾರ್ಕಳ ನಗರದೊಳಗೆ ಇರುವ ಹಾಳಾದ ಕೋಟೆಯ ಪಾಶ್ರ್ವದಲ್ಲಿ ಅನಥವಾಗಿ ಬಿದ್ದಿದ್ದ ಒಂದು ಅಂಜನೇಯನ ವಿಗ್ರಹವಿತ್ತು. ಇದು ಸಾಮಾನ್ಯವಾಗಿ ಕೋಟೆಗಳ ರಕ್ಷಣೆಗಾಗಿ ಸ್ಥಾಪಿಸಲ್ಪಟ್ಟ ಕೋಟೆ ಆಂಜನೇಯ. ಸುಂದರವಾಗಿ ಕಡೆಯಲ್ಪಟ್ಟಿರುವ ಈ ವಿಗ್ರಹವನ್ನು ತಂದು ಪ್ರತಿಷ್ಠಿಸಿರುವುದೇ ಮರಿಗುಡಿಯ ಮುಖ್ಯಪ್ರಾಣ. ಈತನಿಗೆ ಈಗ ನಿತ್ಯ ಪೂಜಾದಿಗಳು ವ್ಯವಸ್ಥಿತವಾಗಿ ನಡೆಯುತ್ತದೆ.

ಜನಬಿಡ ಅತಿ ವಾಹನ ಸಂಚಾರಚವಿರುವ ಮೂರು ಮುಖ್ಯ ಮಾರ್ಗಗಳು ಕೂಡುವ ಸ್ಥಳ ಇದಾಗಿದ್ದರೂ ಪೂಜೆ, ಉತ್ಸವಗಳಿಗೆ ಬರುವ ಜನದಟ್ಟನೆಯನ್ನು ಮತ್ತು ವಾಹನ ಸಂಚಾರವನ್ನು ನಿಯಂತ್ರಿಸುವ ವ್ಯವಸ್ಥೆ ಬಹಳ ಚೆನ್ನಾಗಿರುತ್ತದೆ.

ಕಾರ್ಕಳದಲ್ಲಿ ನಡೆಯುವ ಶ್ರೀ ಅನಂತಶಯನ ಮತ್ತು ಶ್ರೀ ವೆಂಕಟರಮಣ ದೇವಸ್ಥನಗಳ ರಥೋತ್ಸವ ಮತ್ತು ಪ್ರಖ್ಯಾತ ದಿಪೋತ್ಸವಗಳೊಂದಿಗೆ ಅಷ್ಟೆ ಖ್ಯಾತಿವೆತ್ತು ವೈಭವಯುತವಾಗಿ ನಗರದಲ್ಲಿ ನಡೆಯುವ ಮತ್ತೊಂದು ಜಾತ್ರೆ ಎಂದರೆ ಮಾರಿಜಾತ್ರೆ.

By suddi9

Leave a Reply

Your email address will not be published. Required fields are marked *