ಕೈಕಂಬ: ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟ ಸ್ವಚ್ಛ ಭಾರತ ಅಭಿಯಾನಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ಸಿಗುತ್ತಿದ್ದು, ದೇಶವನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ನಾವೂ ಕೂಡಾ ಸಹಭಾಗಿಗಳಾಗಬೇಕು ಎಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ನುಡಿದಿದರು.

ಅವರು ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‍ಬಹುದ್ದೂರು ಶಾಸ್ತ್ರೀಜೀ ಅವರ ಜನ್ಮ ದಿನದ ಅಂಗವಾಗಿ ಆರ್‍ಎಸ್‍ಎಸ್, ಭಜರಂಗದಳ, ವಿಶ್ವಹಿಂದೂ ಪರಿಷತ್ ವತಿಯಿಂದ ಗುರುಪುರ ಕೈಕಂಬದಲ್ಲಿ ನಡೆದ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿತವಚನ ನೀಡಿ ಮಾತಾಡುತ್ತಿದ್ದರು.

ಪ್ರಾಂತ ಸಹಸೇವಾ ಪ್ರಮುಖ್ ಸುಬ್ರಾಯ ನಂದೋಡಿ, ಜಿಲ್ಲಾ ಸೇವಾ ಪ್ರಮುಖ್ ಗಂಗಾಧರ್ ಪೆರ್ಮಂಕಿ, ಭಜರಂಗದಳದ ತಾಲೂಕು ಸಂಚಾಲಕ ನವೀನ್ ಮೂಡುಶೆಡ್ಡೆ, ಜಾಗರಣ ವೇದಿಕೆ ತಾಲೂಕು ಸಂಚಾಲಕ ಹರೀಶ್ ಮಟ್ಟಿ, ವಕೀಲರಾದ ವಿಜಯ ಗೌಡ ಶಿಬ್ರಿಕೆರೆ, ಮಾಜಿ ತಾಪಂ ಉಪಾಧ್ಯಕ್ಷೆ ವಿಜಯ ಲಕ್ಷ್ಮಿ ಶೆಟ್ಟಿ, ಮಾಜಿ ತಾ.ಪಂ. ಸದಸ್ಯರಾದ ವಿನೋದ್ ಮಾಡಾ, ತಾಲೂಕು ಕಾರ್ಯವಾಹಕ ಪರುಷೋತ್ತಮ್ ಮಳಲಿ, ಸಂದೇಶ್ ಕುಕ್ಕಟ್ಟೆ, ಧನಂಜಯ ಮಲ್ಲೂರು, ಜಿತೇಶ್ ಪಡು, ಜಾಗರಣ ವೇದಿಕೆಯ ತಾಲೂಕು ಸಹಸಂಚಾಲಕ ಸುದರ್ಶನ್ ಕೈಕಂಬ, ಹರೀಶ್ ಕಂದಾವರ, ರೂಪೇಶ್ ಅದ್ಯಪಾಡಿ, ಸದೀಪ್ ಕುಕ್ಕಟ್ಟೆ, ಸುದರ್ಶನ್ ಕೈಕಂಬ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕೈಕಂಬ ಮಾರುಕಟ್ಟೆಯಿಂದ ಕೈಕಂಬ ಜಂಕ್ಷನ್ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.
