ವಿಟ್ಲ: ಪಟ್ಟಣ ಪಂಚಾಯತ್ ಅಧಿಕಾರ ಗಳಿಸಿದ ಭಾರತೀಯ ಜನತಾ ಪಕ್ಷದ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಏಕ ದಶ ರುದ್ರಾಭಿಷೇಕ ಸೇವೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ನಗರ ಬಿ ಜೆ ಪಿ ಅಧ್ಯಕ್ಷ ಲೋಕನಾಥ ಶೆಟ್ಟಿ ವಿಟ್ಲ, ಹಿರಿಯ ಮುಖಂಡ ನಿತ್ಯಾನಂದ ನಾಯಕ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಸದಸ್ಯರುಗಳಾದ ಉಷಾ ಕೆ, ಚಂದ್ರಕಾಂತಿ, ಇಂದಿರಾ ಅಡ್ಡಾಳಿ, ರಾಮಧಾಸ ಶೆಣೈ, ಜಯಂತ, ಶ್ರೀಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

