ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 3 ನೇ ವಾರ್ಡಿನಲ್ಲಿ ವಿಟ್ಲದ ಅಡ್ಡದ ಬೀದಿ ಮತ್ತು ಅರಮನೆ ರಸ್ತೆಯ ಸಂಪರ್ಕ ರಸ್ತೆ ಬದಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ವಿಟ್ಲ, ಸದಸ್ಯರುಗಳಾದ ರಾಮದಾಸ ಶೆಣೈ, ಮಂಜುನಾಥ ಕಲ್ಲಕಟ್ಟ, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಟ್ಲ ಲಯನ್ಸ್ ಕ್ಲಬ್ ಕೋಶಾಧಿಕಾರಿ ಹರೀಶ್ ನಾಯಕ್, ಪ್ರಸಾದ್ ಮೋಟಾರ್ಸ್ ನ ಪ್ರಸಾದ್ ಮತ್ತು ಇತರರು ಭಾಗವಹಿಸಿದ್ದರು. ಈ ರಸ್ತೆಯು ವಿಟ್ಲ- ಪುತ್ತೂರು ರಸ್ತೆ ಮತ್ತು ವಿಟ್ಲ- ಕಾಸರಗೋಡು ರಸ್ತೆಗಳ ಸಂಪರ್ಕ ರಸ್ತೆಯಾಗಿದ್ದು ಇದರ ಅಭಿವೃದ್ಧಿಗಾಗಿ ಈ ಕೆಲಸ ಪ್ರಾರಂಭಿಸಲಾಗಿದೆ ಎಂದು ಅಧ್ಯಕ್ಷ ಅರುಣ್ ಎಂ ಹೇಳಿದ್ದಾರೆ.

