ಬಿ.ಸಿ.ರೋಡ್: ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ  ಬಿತ್ತ್ ಲ್   ಪಡುಮಲೆ ಇದರ ಅಂಗವಾಗಿ ಬಿಲ್ಲವ ಬಾಂಧವರ ಸಮಾಲೋಚನಾ ಸಭೆಯು ಬಿಸಿರೋಡ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಸೆ.27 ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ತರಂಜನ್ ವಹಿಸಿದ್ದರು.

???????????????????????????????

???????????????????????????????

ಅವಳಿ ವೀರರು ಕೋಟಿ-ಚೆನ್ನಯ ಮೂಲಸ್ಥಾನವಾದ ಪುತ್ತೂರು ತಾಲೂಕು ಪಡುಮಲೆಯ ಗೆಜ್ಜೆಗಿರಿ ನಂದನ ಬಿತ್ತ್ಲ್‍ನಲ್ಲಿ ಪುನರುತ್ಥಾನ ಪರ್ವಕ್ಕೆ ಚಾಲನೆ ನೀಡಲಾಗಿದೆ. ಭಕ್ತ ಸಮುದಾಯಕ್ಕೆ ತಿಳಿದಿರುವಂತೆ 2016 ರ ಜನವರಿ ಮತ್ತು ಮಾರ್ಚ್  ತಿಂಗಳಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಪ್ರಾಯಶ್ಚಿತ್ತಾದಿ ವಿಧಿ ವಿಧಾನ ನಡೆಸಲಾಗಿದ್ದು, ಪವಿತ್ರ ತೀರ್ಥ ಬಾವಿಯ ಮರು ನಿರ್ಮಾಣದ ಮೂಲಕ ಗಂಗಾ ದರ್ಶನ ಪಡೆಯಲಾಗಿದೆ.

???????????????????????????????

img-20160928-wa0062

ದ.ಕ ಬಿಲ್ಲವರ ಮೂಲಸ್ಥಾನ ಹಾಗೂ ಸ್ವಭಿಮಾನದ ಕ್ಷೇತ್ರ ಹಾಗೆಯೇ ಕೋಟಿ ಚೆನ್ನಯರ ಮೂಲಸ್ಥಾನ ಆದಿ ದೈವ ಧೂಮಾವತಿ ಸ್ಥಾನ ಸಾಯನ ಬೈದ್ಯೆ- ದೇಯಿ ಬೈದ್ಯೆತಿಯ ಮೂಲಸ್ಥಾನ ಶ್ರಿ ಕ್ಷೇತ್ರ ಗೆಜ್ಜೆಗಿರಿ ನಂದನ ಸ್ಥಳದಲ್ಲಿ ಗರೋಡಿ ನಿರ್ಮಾಣ ಮತ್ತು ಅಭಿವೃದ್ಧಿ ಪುನರುಸ್ಥಾನ ಮಾಡುವ ಬಗ್ಗೆ ಶ್ರೀ. ಕ್ಷೇ. ಗೆಜ್ಜೆಗಿರಿ ನಂದನ ಸ್ಥಳದಲ್ಲಿ 4 ಶತಮಾನಗಳ ಹಿಂದೆ ಆಗ್ಬೇಕಿದ್ದ ಮಹಾ ಕಾರ್ಯ ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರದ ಮೂಲ ಗರೋಡಿ ನಿರ್ಮಾಣ ಅಭಿವೃದ್ಧಿ, ಪುನರುಸ್ಥಾನ ಕೆಲಸಕ್ಕೆ  ಬಿಲ್ಲವ ಸಮಾಲೋಚನಾ ಸಮಾರಂಭದಲ್ಲಿ ಸೆ.27 ರಂದು ಚರ್ಚಿಸಲಾಯಿತು. ಹಾಗೂ ಮುಖ್ಯ ಅಥಿತಿಯಾಗಿ ಮಾತನಾಡಿದ ಸುಧಾಕರ್ ಸುವರ್ಣ ಸಂಕ್ಷಿಪ್ತ ವಿಷಯಗಳ ಕುರಿತಾಗಿ ಮಂಡಿಸಿದರು.

???????????????????????????????

ಈ ಸಂದರ್ಭದಲ್ಲಿ  ಕ್ಷೇತ್ರದ ಶ್ರೀಧರ ಪೂಜಾರಿ, ಕೇಶವ್ ಶಾಂತಿ, ಶೇಸಪ್ಪ ಕೋಟ್ಯಾನ್, ಪಿತಾಂಬರ ಹೇರಾಜೆ, ಪ್ರಕಾಶ್ ಅಂಚನ್, ರವಿ ಪೂಜಾರಿ, ಭುವನೇಶ್ ಪಚಿನಡ್ಕ, ರಾಘವ ಅಮೀನ್, ಉಪಸ್ಥಿತರಿದ್ದರು. ಚರ್ಚೆಯಲ್ಲಿ  ವಾಸು ಪೂಜಾರಿ,ಶಶಿಕಿರಣ್, ಬೇಬಿ ಕುಂದರ್  ಹಾಗೂ ಹಲವು ಬಿಲ್ಲವ ಬಾಂಧವರು ಚರ್ಚೆಯಲ್ಲಿ ಪಾಲ್ಗೊಂಡು ಸಲಹಾ ಸೂಚನಗಳನ್ನು ನೀಡಿದರು.  ದೀಪಕ್ ಕೋಟ್ಯಾನ್ ಧನ್ಯವಾದಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *