ಮೂಡುಬಿದಿರೆ: ಎಸ್. ಎನ್ .ಎಂ. ಪಾಲಿಟೆಕ್ನಿಕ್ ಮೂಡಬಿದಿರೆ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಯ ಉದ್ಘಾಟಿಸಲಾಯಿತು.ಶ್ರೀಮಹಾವೀರ ಉಪನ್ಯಾಸಕ ಹರೀಶ್ ಘಟಕದ ಚಟುವಟಿಕ ಉದ್ಘಾಟಿಸಿ, ರಾಷ್ಟ್ರೀಯ ಸೇವಾ ಯೋಜನೆಯು ನಡೆದು ಬಂದ ರೀತಿ ಹಾಗೂ ಅದು ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯಲ್ಲಿ ಹೇಗೆ ಸಹಕಾರಿಯಾಗುವುದೆಂದು ವಿವರಿಸಿದರು.

ಪಾಲಿಟೆಕ್ನಿಕ್ ಪ್ರಾಂಶುಪಾಲ ಜೆ.ಜೆ. ಪಿಂಟೋ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ರಾಮ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ವಿದ್ಯಾರ್ಥಿ ನಾಯಕರಾದ ಸತೀಶ್ ಕೆ.,ದೀಕ್ಷೀತ್, ರಮ್ಯ, ನಿಶ್ರಿತಾ ವೇದಿಕೆಯಲ್ಲಿದ್ದರು.ಅಮಿತ್‍ರಾಜ್ ಸ್ವಾಗತಿಸಿದರು. ಸನತ್‍ರಾಜ್ ಘಟಕದ ನಾಯಕರನ್ನು ಪರಿಚಯಿಸಿದರು. ಮೇಘಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಸುಜಿತ್ ವಂದಿಸಿದರು.
