ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಹಾಗೂ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಇದರ ಸಹಯೋಗದಲ್ಲಿ ಜನಜಾಗೃತಿ ವೇದಿಕೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಸಲಾಯಿತು.

???????????????????????????????

ಶಾಲಾ ಪ್ರಾಂಶುಪಾಲ ಜಯರಾಮ ರೈ ಅಧ್ಯಕ್ಷತೆಯಲ್ಲಿ ಬಂಟ್ವಾಳ ಜನಜಾಗೃತಿ ವೇದಿಕೆ ಸದಸ್ಯ ಬಾಲಕೃಷ್ಣ ಕಾರಂತ ಎರುಂಬು ಇವರು ದುಶ್ಚಟದ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ವಿಟ್ಲ ವಲಯ ಮೇಲ್ವಿಚಾರಕ ಜನಾರ್ಧನ ಪ್ರಸ್ತಾವಿಸಿ ಸ್ವಾಗತಿಸಿದರು. ಶಾಲಾ ಉಪಪ್ರಾಂಶುಪಾಲೆ ಶಾಲಿನಿ ನೋಂಡ, ಒಕ್ಕೆತ್ತೂರು ಸೇವಾ ಪ್ರತಿನಿಧಿ ಪ್ರಕಾಶ್ ಕೋಡಿ ವೇದಿಕೆಯಲ್ಲಿದ್ದರು. ವಿಟ್ಲ ಬಿ ಒಕ್ಕೂಟದ ಸೇವಾ ಪ್ರತಿನಿಧಿ ಸರಿತಾ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *