ಮೂಡುಬಿದಿರೆ: ನಾಡ ಹಬ್ಬವೆನಿಸಿರುವ ದಸರಾ ಹಬ್ಬದ ಕಾರಣಕ್ಕಾಗಿಯೇ ಶೈಕ್ಷಣಿಕ ವರ್ಷದ ಮಧ್ಯಾವಧಿ ರಜೆಯನ್ನು ದಸರಾ ರಜೆ ಎಂದು ಕರೆಯಲಾಗುತ್ತದೆ. ಈ ಬಾರಿ ನವರಾತ್ರಿ ಅ. 1ರಿಂದ ಆರಂಭವಾಗಲಿದೆ. ಆದರೆ ದಸರಾ ರಜೆ ಅ10ರಿಂದ ಆರಂಭವಾಗುತ್ತಿರುವುದು ವಿಪರ್ಯಾಸ.
ದಸರೆಯ ಮಹತ್ವವನ್ನು ಗಮನದಲ್ಲಿರಿಸಿಕೊಂಡು ಈ ದಸರಾ ರಜೆಯನ್ನು ಅ. 10ರ ಬದಲಾಗಿ ಅ. 3ರಿಂದ 21ರವರೆಗೆ ನೀಡಬೇಕು. ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ರಜೆಯ ಬದಲಾವಣೆ ಕುರಿತು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಉಪಾಧ್ಯಾಕ್ಷ ರಾಮಕೃಷ್ಣ ಶಿರೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
