ಬಂಟ್ವಾಳ: ಬಡಗಬೆಳ್ಳೂರು ಬಾಳಿಕೆ ಯಕ್ಷಗಾನ ಕಲಾ ಸಂಘ ವತಿಯಿಂದ ಪ್ರದಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಬಿ. ಜೆ. ಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬಿ. ದೇವ್‍ದಾಸ್ ಶೆಟ್ಟಿ ಆಗಮಿಸಿದ್ದು ಗ್ರಾಮೀಣ ಪ್ರದೇಶದಲ್ಲಿ ಪ್ರದಾನಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವುದು ಶ್ಲಾಘನೀಯ ಎಂದರು.




ಕಾರ್ಯಕ್ರಮದಲ್ಲಿ ‘ಮನೆಗೊಂದು ಮರ ಊರಿಗೊಂದು ವನ’ ಧ್ಯೇಯದಡಿ ಗ್ರಾಮಸ್ಥರಿಗೆ ಸಸಿ ವಿತರಿಸಲಾಯಿತು. ವೇದಿಕೆಯಲ್ಲಿ ಬಂಟ್ವಾಳ ಬಿ. ಜೆ. ಪಿ ಕಾರ್ಯಕಾರಿಣಿ ಸಮೀತಿ ಸದಸ್ಯರಾದ ಪ್ರಕಾಶ್ ಆಳ್ವ ಗುಂಡಾಲ, ಬಂಟ್ವಾಳ ಬಿ. ಜೆ. ಪಿ ರೈತ ಮೋರ್ಚಾದ ಉಪಾಧ್ಯಕ್ಷರಾದ ರಮೇಶ್ ಬಟ್ಟಾಜೆ, ಯಕ್ಷಗಾನ ಕಲಾ ಸಂಘ ಬಾಳಿಕೆ ಅಧ್ಯಕ್ಷರಾದ ಚಂದ್ರಶೇಖರ್ ರಾವ್ ಬಾಳಿಕೆ, ಮೊಸರು ಕುಡಿಕೆ ಉತ್ಸವ ಸಮೀತಿ ಬಾಳಿಕೆ ಇದರ ಅಧ್ಯಕ್ಷರಾದ ಈಶ್ವರ ಪೂಜಾರಿ ಉಪಸ್ಥಿತರಿದ್ದರು. ಬಿ. ದೇವಪ್ಪ ಪೂಜಾರಿ ಬಾಳಿಕೆ ಸ್ವಾಗತಿಸಿ, ಅನೀಶ್ ಬಾಳಿಕೆ ವಂದಿಸಿದರು. ಸಂದೇಶ್ ಕುಮಾರ್ ಬಾಳಿಕೆ ಕಾರ್ಯಕ್ರಮ ನಿರೂಪಿಸಿದರು.



