ಬಂಟ್ವಾಳ : ಸಜಿಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಕರಸೇವೆಯನ್ನು ಮಾಜಿ ಜಿ. ಪಂ. ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ತಾ. ಪಂ. ಅಧ್ಯಕ್ಷ ಯಶವಂತ ದೇರಾಜೆ ವಹಿಸಿದ್ದರು. ಕರಸೇವೆಗೆ ತಾ. ಪಂ. ಸದಸ್ಯ ಕೆ. ಸಂಜೀವ ಪೂಜಾರಿ ಚಾಲನೆ ನೀಡಿದರು.
ಮಂಗಳೂರಿನ ಉದ್ಯಮಿ ಎಂ. ಮಹಾಬಲ ಕೊಟ್ಟಾರಿ, ಸ. ಮೂ. ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಪಂ. ಸದಸ್ಯ ವಿಶ್ವನಾಥ ಕುಡೂರು, ನರೇಂದ್ರ ಆಳ್ವ, ಜೀರ್ಣೋದ್ಧಾರ ಸಮಿತಿಯ ಪ್ರೇಮಾ ಶೆಟ್ಟಿ, ಎಂ. ಸುಬ್ರಹ್ಮಣ್ಯ ಭಟ್, ಲಿಂಗಪ್ಪ, ಜಯಪ್ರಕಾಶ ಕುಶೇಷ, ಅರವಿಂದ ಭಟ್, ಕುಶಾಲಾಕ್ಷ, ಸುಬ್ರಾಯ ಜೋಷಿ, ರುಕ್ಮಯ್ಯ, ಮೋನಪ್ಪ , ಚಂದ್ರಹಾಸ, ಮುಂತಾದವರು ಉಪಸ್ಥಿತರಿದ್ದರು.

