ವಿಟ್ಲ: ವಿಟ್ಲ  ಪಡ್ನೂರು ಗ್ರಾಮದ ಕೊಡಂಗಾಯಿ ಮೂರುಕಜೆ ಮೈತ್ರೇಯಿ ಗುರುಕಲಮ್ ನಲ್ಲಿ ವಿದ್ಯಾರ್ಥಿಗಳ ಪಂಚಮುಖಿ ಶಿಕ್ಷಣದ ಕಲಾ ಶಿಕ್ಷಣದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ರತ್ನಾವತಿ ಭಟ್ ವಿಟ್ಲ ಮತ್ತು ಬಳಗದವರಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ `ಮೋಕ್ಷ ಸಂಗ್ರಾಮ’ ವು ನಡೆಯಿತು.

???????????????????????????????

ಈ ಕಾರ್ಯಕ್ರಮವನ್ನು ವಿಟ್ಲ ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಸುಂದರ ಶೆಟ್ಟಿ ಉದ್ಘಾಟಿಸಿದರು. ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಪ್ರಾಂತ್ಯ ಸಂಘದ ನಾರಾಯಣ ಶೇವಿರೆ, ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಉಪಸ್ಥಿತರಿದ್ದರು. ಹಿಮ್ಮೇಳದಲ್ಲಿ ದುರ್ಗಾಪರಮೇಶ್ವರಿ ಕುಕ್ಕಿಲ, ಪ್ರಕಾಶ್ ವಿಟ್ಲ, ಅಭಿಷೇಕ್ ಬಿ ಚಣಿಲ, ಅವಿನಾಶ್, ಹಾಗೂ ರತ್ನಾವತಿ, ಅರ್ಥಧಾರಿಗಳಾಗಿ ಸಾವಿತ್ರಿ ಶಾಸ್ತ್ರಿ ಶಿರಂಕಲ್ಲು, ಶಾರದಾ ಕನ್ಯಾನ, ಮಧುರಾ ಕೆ. ಕೆದಿಲ, ಪ್ರಭಾ ಬಿ ಚಣಿಲ, ಮತ್ತು ಹೇಮಾವತಿ ಟಿ. ಭಟ್ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *