ಮೂಡುಬಿದಿರೆ: ವಾಮಂಜೂರಿನ ಮಂಗಳ ಜ್ಯೋತಿ ಪ್ರೌಢಶಾಲೆ ನಡೆದ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಪ್ರೌಢಶಾಲೆಯ ಬಾಲಕರು 3 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಪಡೆದು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.. 85ಕೆಜಿ ವಿಭಾಗದಲ್ಲಿ ಅಭಿಷೇಕ್ ಎಂ.ಬಿ. ಪ್ರಥಮ, 85+ಕೆಜಿ ವಿಭಾಗದಲ್ಲಿ ಅಭಿಲಾಷ್ ಎಂ.ಬಿ. ದ್ವಿತೀಯ, 58ಕೆಜಿ ವಿಭಾಗದಲ್ಲಿ ರಘುನಾಥ್ ಪ್ರಥಮ, 53ಕೆಜಿ ವಿಭಾಗದಲ್ಲಿ ಶಂಕರ್ ಎಸ್.ಎಸ್. ಪ್ರಥಮ, 76ಕೆಜಿ ವಿಭಾಗದಲ್ಲಿ ಹರ್ಷ ತೃತೀಯ, 42ಕೆಜಿ ವಿಭಾಗದಲ್ಲಿ ಯೋಗೇಶ್ ಹೆಚ್. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

