ಕೈಕಂಬ: ಸೋಮವಾರ ಸಂಭವಿಸಿದ ಮಹಿಳೆಯೊಬ್ಬರ ಸಾವು ಸೇರಿದಂತೆ ಈ ಹಿಂದೆ ಸಂಭವಿಸಿದ ಅಣೇಕ ಪ್ರಕರಣಗಳ ಹಿನ್ನೆಲೆಯಲ್ಲಿ ಗುರುಪುರ ಕೈಕಂಬದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳವರು ಬಜಪೆ ಪೊಲೀಸ್ ಠಾಣೆಗೆ ಸಾರ್ವಜನಿಕರ ಹಿತಶಕ್ತಿಯ ದೂರೋಂದನ್ನು ಮಂಗಳವಾರ ಸಲ್ಲಿಸಿರುತ್ತಾರೆ.

ಗಂಜಿಮಠ ಕುಕ್ಕಟ್ಟೆಗಜಂತೋಡಿ ಎಂಬಲ್ಲಿಯ ನಿವಾಸಿಯಾಗಿದ್ದ ಸುಮತಿ (54 ) ಎಂಬವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಗ ವೈದ್ಯರ ನಿರ್ಲಕ್ಷ ಹಾಗೂ ಆಸ್ಪತ್ರೆಯಲ್ಲಿನ ಪರಿಕರಗಳ ಕೊರತೆಯಿಂದಾಗಿ ಸುಮತಿ ಅವರು ಮೃತಪಟ್ಟಿರುವುದನ್ನು 108 ಆಂಬ್ಯುಲೆನ್ಸ್ ನ ವೈದ್ಯಕೀಯ ಸಿಬ್ಬಂದಿ ದೃಡಪಡಿಸಿದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಬೇಜವಾಬ್ದಾರಿತನದ ಬಗ್ಗೆ ಸಾರ್ವಜನಿಕರು ಆಕ್ರೋಷಿತರಾಗಿ ಪ್ರತಿಭಟನೆಗೆ ತಕ್ಷಣವೇ ಮುಂಧಾಗಿದ್ದಾರು ಈ ಹಿಂದೆಯು ಇದೇ ಆಸ್ಪತ್ರೆಯ ನಿರ್ಲಕ್ಷದಿಂದಾಗಿ ಸಾವು ಸಂಭವಿಸಿರುವುದು ಅಥವಾ ಮಾರಣಾಂತಿಕ ಗಂಭೀರ ಸ್ಥಿತಿಯಲ್ಲಿ ಉಳಿದುಕೊಂಡಿರುವುದು ಮುಂತಾದ ಹಲವು ಪ್ರಕರಣಗಳು ಸಂಭವಿಸಿದ್ದರು ಸಂತೃಷ್ತರು ದೂರು ನೀಡಿರುವುದು ಬಹಳ ಕಡಿಮೆ.
ಈ ಪ್ರಕರಣಗಳ ಬಗ್ಗೆ ಪರಿಣಾಮಕಾರಿ ತಣಿಕೆಯನ್ನು ನಡೆಸಿ ಆಸ್ಪತ್ರೆಯ ಸ್ಥಿತಿಗತಿಯನ್ನು ಪರಿಸೀಲಿಸಿ ವೈದ್ಯರ ನಿರ್ಲಕ್ಷತೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಸರಕಾರದ ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಕಾರಿ, ಲೋಕಸಭಾ ಸದಸ್ಯರು, ಶಾಸಕರು, ಹಾಗೂ ಜಿ.ಪಂ,ತಾ ಪಂ ಸದಸ್ಯರಿಗೆ ಗ್ರಾ.ಪಂ ಗೆ ಕೂಡ ದೂರನ್ನು ಸಲ್ಲಿಸಲಾಗಿದೆ. ಸಾರ್ವಜನಿಕರಿಂದ ದೂರನ್ನು ಸ್ವೀಕರಿಸಿದ ಬಜಪೆ ಪೊಲೀಸ್ ಇನ್ಸೆಪೆಕ್ಟರ್ ಟಿ.ಡಿ. ನಾಗರಾಜ್ ಅವರು ತಕ್ಷಣವೇ ಸಾರ್ವಜನಿಕ ಹಿತಶಕ್ತಿಯ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ತನಿಕೆ ನಡೆಸುವುದಾಗಿ ತಿಳಿಸಿರುತ್ತಾರೆ.
