ಮಂಗಳೂರು: ಪತಂಜಲಿ, ಸನಾತನ ಹರ್ಬಲ್ ಸ್ಟ್ರಾಟಜಿ, ದೇಸೀ ಉತ್ಧಾನ, ಐಸಿರಿ ಮುಂತಾದ ದೇಶೀಯ ಉತ್ಪನ್ನಗಳ ದೇಸೀ ಮಳಿಗೆ ಬೋಂದೆಲ್‍ನ ರಮಶಂಕರಿ ಎಂಟರ್‍ಪ್ರೈಸಸ್ ತನ್ನ ಗ್ರಾಹಕರಿಗಾಗಿ ಸ್ವಾತಂತ್ರೋತ್ಸವದ ಕೊಡುಗೆಯಾಗಿ ಪ್ರಸ್ತುತ ಪಡಿಸಿದ್ದ “ಲಕ್ಕಿ ಕೂಪನ್”ನ ಅದೃಷ್ಟ ಶಾಲಿ ಇಬ್ಬರು ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಆ. 17 ರಂದು ನಡೆಯಿತು.dsc_0978

dsc_0975

ಸಂಸ್ಥೆಯ ಮಾಲಕರಾದ ಶಿವದುರ್ಗಾ ಶೆಟ್ಟಿ ಅವರ ತಂದೆಯವರಾದ  ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರೂ ಆಗಿರುವ ರಾಮಣ್ಣ ಶೆಟ್ಟಿ ಮುಗಿಪು ಮತ್ತು ರಾಮಣ್ಣ ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಶಂಕರಿ ಆರ್. ಶೆಟ್ಟಿ ಅವರುಗಳು ಲಕ್ಕಿ ಕೂಪನ್ ವಿಜೇತರಾದ ಬೋಂದೆಲ್ ಕೃಷ್ಣನಗರದ ಸುನೀಲ್ ಎಸ್. ರಾವ್ ಮತ್ತು ವಾಮಂಜೂರು ಸಂತೋಷನಗರದ ಜೆನೆಟ್ ಫೆರ್ನಾಂಡೀಸ್ ಅವರಿಗೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರೊಂದಿಗೆ ಗ್ರಾಹಕರಾದ ಉಮೇಶ್ ನಾಯಕ್, ನಂದರಾಮ್, ಮಹೇಶ್ ಆಚಾರ್ , ಮಧುಕರ್ , ಲತೀಶ್ ಎ. ಮಾರ್ಕ್ ಕೀರ್ತಿ ಆದರ್ಶ್ ಉಪಸ್ಥಿತರಿದ್ದರು.

dsc_1027

dsc_1030

ಉತ್ತಮ ಮತ್ತು ಉತ್ಕೃಷ್ಟ ದರ್ಜೆಯ ಸ್ವದೇಶೀ ಸೊಗಡಿನ ಆಹಾರ ಪದಾರ್ಥಗಳು ಮತ್ತು ದಿನ ಬಳಕೆ ಸಾಮಗ್ರಿಗಳನ್ನು ಪಡೆಯುವ ಬಗ್ಗೆ ಜನತೆ ಆಸಕ್ತರಾಗಿದ್ದರೂ, ಇದು ಎಲ್ಲಿ ಯಾವಾಗ ದೊರೆಯುತ್ತದೆ ಎಂಬ ಗೊಂದಲ ಹೊಂದಿರುವ ಈ ಕಾಲ ಘಟ್ಟದಲ್ಲಿ “ರಮಶಂಕರಿ ಎಂಟರ್ ಪ್ರೈಸಸ್” ತನ್ನ ಮಳಿಗೆ ಆರಂಭಿಸುವ ಮೂಲಕ ಜನತೆಯ ಬೇಡಿಕೆಗಳಿಗೆ ಸ್ಪಂದಿಸುವ ಕಾಮಧೇನುವಿನಂತೆ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಸಂತಸದಾಯಕ ಸಂಗತಿಯಾಗಿದೆ. ಈ ಸಂಸ್ಥೆ ಮುಂದಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಬೆಳೆದು ನಾಡಿನ ಜನತೆಯ ನೆಚ್ಚಿನ ಮಳಿಗೆಯಾಗಿ ರೂಪುಗೊಳ್ಳಲಿ ಎಂದು ಆಶಿಸುತ್ತೇನೆ.

dsc_1034-copy

ಶ್ರೀಮತಿ ಸುಮವಾಣಿ ಜೆ. ನಾಯ್ಕ್ ಆಗಸ್ಟ್ 15 ರಂದು ಅದೃಷ್ಟ ಚೀಟಿ ಎತ್ತುವ ಮೂಲಕ 2ನೇ ಫಲಿತಾಂಶವನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶಿವದುರ್ಗಾಶೆಟ್ಟಿ , ಗ್ರಾಹಕಿ ಡಿಂಪಲ್ , ಉಮೇಶ್‍ನಾಯಕ್ , ನಂದಕುಮಾರ್ (ರಾಮ್) ಮಹೇಶ್ ಆಚಾರ್ , ಶ್ರೀಮತಿ ಕೀರ್ತಿ ಆದರ್ಶ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *