ವಿಟ್ಲ: ವಿಟ್ಲ ಜೇಸಿಐ ವತಿಯಿಂದ ಜೇಸಿಐ ಸಪ್ತಾಹದ ಐದನೇ ದಿನವಾದ 13-09-2016 ರಂದು ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ದಿ| ಸುರೇಶ್ ಹಂದಾಡಿ ಸ್ಮರಣಾರ್ಥ ಬಂಟ್ವಾಳ ತಾಲೂಕು ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆ (ವಿಷಯ: ಕುಷ್ಠ ರೋಗ) ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಶಾಂತ್ ಬಿ ಎನ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷರ ವಿಶೇಷ ಪ್ರತಿನಿಧಿ ಶಕೀರ್ ಯಂ ಹಾವಂಜೆ ಮತ್ತು ಹಿರಿಯ ಶಿಕ್ಷಕ ಸಿ.ಹೆಚ್. ಸುಬ್ರಹ್ಮಣ್ಯ ಭಟ್ ಭಾಗವಹಿಸಿದ್ದರು. ವಿಟ್ಲ ಜೇಸಿಐ ನಿಕಟ ಪೂರ್ವ ಅಧ್ಯಕ್ಷ ಮೋಹನ ಮೈರ ಮತ್ತು ಸಪ್ತಾಹದ ನಿರ್ದೇಶಕ ರಮೇಶ್ ಬಿ ಕೆ ವೇದಿಕೆಯಲ್ಲಿದ್ದರು. ಅಧ್ಯಕ್ಷ ಬಾಬು ಕೆ ವಿ ಸ್ವಾಗತಿಸಿದರು, ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಂದಿಸಿದರು. ರಾಜಶೇಖರ್ ನಿರೂಪಿಸಿದರು. ಶೃತಿ ಶೆಟ್ಟಿ ಮತ್ತು ಈಶ್ವರ ಭಟ್ ಸಹಕರಿಸಿದರು.

