ಸದಾ ಹೊಸತನವನ್ನು ಹುಡುಕುವ, ಕ್ರಿಯಾಶೀಲವಾಗಿರುವ ಸುದಾನ ಶಾಲೆ, ಪುಟಾಣಿ ಮಕ್ಕಳಿಗಾಗಿ ‘ಕಲರ್ ಸುದಾನ’ ದಿನವನ್ನು ಪ್ರತಿ ಶನಿವಾರ ಆಯೋಜಿಸುತ್ತಿದೆ. ಯುಕೇಜಿ ಮಕ್ಕಳಿಗಾಗಿ ರೆಡ್ ಡೆ, ಗ್ರೀನ್ ಡೆ, ಆರೆಂಜ್ ಡೇ, ಪರ್ಪಲ್ ಡೇ . ಎಂದು ಬಣ್ಣಗಳನ್ನೇ ಪ್ರಧಾನವಾಗಿರಿಸಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆ ದಿನ ಯುಕೇಜಿ ಮಕ್ಕಳು, ಶಾಲೆಯ ಎಲ್ಲಾ ಶಿಕ್ಷಕರು ಆ ದಿನದ ಬಣ್ಣದ ದಿರಿಸನ್ನು ಧರಿಸುತ್ತಾರೆ. ಆಯ್ಕೆ ಮಾಡಿದ ಬಣ್ಣದಲ್ಲಿರುವ ತರಕಾರಿಗಳನ್ನು, ಹಣ್ಣು, ಹೂವು, ಎಲೆ ಇನ್ನಿತರ ವಸ್ತುಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ.
img_20160730_175419

img_20160730_115631816

img_20160723_114642507

img_20160723_120002818

ಅದೇ ಬಣ್ಣದ ಕರಕುಶಲ ವಸ್ತುಗಳನ್ನು ಮಕ್ಕಳಿಂದಲೇ ಮಾಡಿಸಿ ತರಗತಿಯನ್ನು ಅಲಂಕರಿಸಲಾಗುತ್ತದೆ. ಹೆತ್ತವರೂ ಈ ಕಲರ್‍ಡೇ ಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುತ್ತಿದ್ದಾರೆ. ಬಣ್ಣಗಳನ್ನೇ ಆಧಾರವಾಗಿರಿಸಿಕೊಂಡು ವಸ್ತುಗಳನ್ನು ಮಕ್ಕಳಿಗೆ ಕಲಿಸುವ ಪ್ರಯತ್ನವಿದು ಎಂದು ಸಂಯೋಜಕ ಶಿಕ್ಷಕರಾದ ಶ್ರೀಮತಿ ಐರಿಸ್, ಕವಿತಾವಿಜಯ ಮತ್ತು ಸತ್ಯಪೂರ್ಣ ಹೇಳುತ್ತಾರೆ. ಶಾಲಾ ಸಂಚಾಲಕರಾದ ರೆ| ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗರಾಜ್, ಆಡಳಿತಧಿಕಾರಿಗಳಾದ ಶ್ರೀ ಜತ್ತಪ್ಪ ರೈ ಕುಕ್ಕುವಳ್ಳಿ ಈ ಚಟುವಟಿಕೆಗಳಿಗೆ ಬೆಂಬಲವಾಗಿದ್ದಾರೆ. ಶನಿವಾರದಂದು ಸುದಾನ ಶಾಲೆ ಅರ್ಥಪೂರ್ಣವಾಗಿ ವರ್ಣಮಯವಾಗುತ್ತದೆ.

By suddi9

Leave a Reply

Your email address will not be published. Required fields are marked *