ಮೂಡುಬಿದಿರೆ: ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆದ 53 ಗಣೇಶೋತ್ಸವದ ಪ್ರಯುಕ್ರ ಮೂಡುಬಿದಿರೆ ಸಮಾಜಮಂದಿರದಿಂದ ಅಲಂಗಾರು ಬಡಗಶ್ರೀಮಹಾಲಿಂಗೇಶ್ವರ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆದು, ಬಳಿಕ ದೇವಸ್ಥಾನದ ಮಾನಸಗಂಗೋತ್ರಿ ಸರೋವರದಲ್ಲಿ ವಿಗ್ರಹವನ್ನು ವಿಸರ್ಜಿಸಲಾಯಿತು. ಶೋಭಾಯಾತ್ರೆಯಲ್ಲಿ ಮೂಡುಬಿದಿರೆಯ ವಿವಿಧ ಸಂಘ ಸಂಸ್ಥೆಗಳ ಒಟ್ಟು 16 ಸ್ತಬ್ಧಚಿತ್ರಗಳು ಭಾಗವಹಿಸಿದವು. ಹುಲಿವೇಷ, ಚೆಂಡೆ ಸಹಿತ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಸಮಿತಿಯ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ, ಉಪಾಧ್ಯಕ್ಷ ಕೃಷ್ಣರಾಜ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನಾರಾಯಣ ಪಿ.ಎಂ, ಸಂಚಾಲಕ ರಾಜಾರಾಂ, ಸಮಿತಿಯ ಪದಾಧಿಕಾರಿಗಳು ಸಹಿತ ಸಾವಿರಾರು ಜನರು ಭಾಗವಹಿಸಿದರು.






