ಮೂಡುಬಿದಿರೆ : ಜೇಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ಜೇಸಿ ಸಪ್ತಾಹ-2016 ಸರಣಿ ಕಾರ್ಯಕ್ರಮ ಹಾಗೂ ಸುರಕ್ಷಾ ದಿನಾಚರಣೆಯನ್ನು ಮಂಜುಳಾ ಅಭಯಚಂದ್ರ ಜೈನ್ ಧವಲಾ ಕಾಲೇಜು ಹಾಗೂ ರೋಟರಿ ಶಾಲೆಯಲ್ಲಿ ಶುಕ್ರವಾರ ಉದ್ಘಾಟಿಸಿದರು.
mbd_sep9_7
ಸುರಕ್ಷಾ ದಿನಾಚರಣೆಯ ಅಂಗವಾಗಿ ಹೆಣ್ಣು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದಾಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಅಳವಡಿಸಲು `ನ್ಯಾಪ್‍ಕಿನ್’ ಮೆಷಿನ್‍ನನ್ನು ಜೇಸಿಐ ಅಧ್ಯಕ್ಷೆ ರಶ್ಮಿತಾ ಯುವರಾಜ್ ಜೈನ್ ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು.
ಧವಲಾ ಕಾಲೇಜಿನ ಪ್ರಾಂಶುಪಾಲ ರವೀಶ್ ಕುಮಾರ್, ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ವಿನ್ಸೆಂಟ್ ಡಿ’ಕೋಸ್ತಾ, ರೋಟರಿ ಟೆಂಪಲ್ ಟೌನ್ ಆಫ್ ಮೂಡುಬಿದಿರೆಯ ಯುವರಾಜ್ ಜೈನ್, ಜೇಸಿ ಪ್ರತಾಪ್ ಕುಮಾರ್, ಕಾರ್ಯದರ್ಶಿ ಪ್ರಜ್ವಲ್, ಕೋಶಾಧಿಕಾರಿ ಹಮೀದ್, ವಿನಯಚಂದ್ರ, ಸಂತೋಷ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *