ಬಂಟ್ವಾಳ: ಅಮ್ಟಾಡಿ ಗ್ರಾಮವನ್ನು ಸ್ವಚ್ಚ ಗ್ರಾಮ ಮತ್ತು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಲು ವಿಶೇಷವಾಗಿ ಮಹಿಳೆಯರ ಸಹಕಾರ ಅಗತ್ಯವಾಗಿ ಬೇಕು ಎಂದು ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಹೇಳಿದರು. ಅವರು ಗ್ರಾ.ಪಂ.ಅಮ್ಟಾಡಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಮ್ಟಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಂದ ಗ್ರಾಮದ ಅಭಿವೃದ್ಧಿಯ ಕ್ರಾಂತಿ ಸಾಧ್ಯ. ಆ ನಿಟ್ಟಿನಲ್ಲಿ ಗ್ರಾಮದ ಬೆಳವಣಿಗೆಯಲ್ಲಿ ಮಹಿಳೆಯರು ವಿಶೇಷ ಮುತುವರ್ಜಿ ವಹಿಸಿ, ಅಮ್ಟಾಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಿ ಎಂದು ಹೇಳಿದರು. ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಮಲ್ಲಿಕಾ ವಿ ಶೆಟ್ಟಿ, ಉಪಾಧ್ಯಕ್ಷೆ ಯಶೋಧ, ಸಂಪನ್ಮೂಲ ವ್ಯಕ್ತಿಗಳಾದ ಗ್ರಾಮ ಕರಣಿಕ ಶಶಿಕುಮಾರ್, ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ, ಗ್ರಾ.ಪಂ. ಸದಸ್ಯರಾದ ಐರಿನ್ ಡಿ’ಸೋಜಾ, ಚಂದ್ರಾವತಿ, ರತಿ ಭಂಡಾರಿ ಮತ್ತು ಶ್ರೀಮತಿ ಉಪಸ್ಥಿತರಿದ್ದರು.

DSC_4178
ಪಿಡಿಓ ರಾಜಶೇಖರ ರೈ ಸ್ವಾಗತಿಸಿ, ಪ್ಲೇವಿ ಡಿ’ಸೋಜಾ ವಂದಿಸಿದರು. ವಸಂತಿ ದುರ್ಗಾನಗರ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *