ಕೈಕಂಬ:ಮದರಸಕ್ಕೆ ಸಂಬಂದಿಸಿದ ವಿವಾದಾತ್ಮಕ ಪ್ರಕರಣವೊಂದರ ಬಗ್ಗೆ ವರದಿಗೆಂದು ಬಂದ ದೃಶ್ಯ ಮಾಧ್ಯಮದ ವರದಿಗಾರರು ಹಾಗೂ ತಂಡವನ್ನು ದಿಗ್ಬಬಂಧನದಲ್ಲಿಟ್ಟು ಜಮಾತೆ ಸಮಿತಿಯವರು ತಂಡದ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಂಗಳವಾರ ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಸುರಲ್ಪಾಡಿ ಮಸೀದಿ ಬಳಿ ನಡೆದಿದೆ.
ಮಸಿದಿಗೆ ಒಳಪಟ್ಟ ಮದರಸದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಬೆಳಿಗ್ಗೆ 6ಘಂಟೆಗೆ ಮಳೆ ಇದ್ದರೂ ಅಸ್ಲೆಂಬ್ಲಿ ನಡೆಸುವ ಬಗ್ಗೆ ಕೆಲ ಮಕ್ಕಳ ಪೋಷಕರು ಅಕ್ಷೇಪಣೆ ಸಲ್ಲಿಸಿದ್ದ ಹಿನ್ನಲೆಯಲ್ಲಿ ಮದರಸದಲ್ಲಿ ಕಲಿಸುವ ಶಿಕ್ಷಕನನ್ನು ಅಮಾನತಿನಲ್ಲಿಡಲಾಗಿತ್ತು ಇದರಿಂದ ಅಕ್ರೋಸಗೊಂಡ ಶಿಕ್ಷಕ ಮಾಧ್ಯಮಗಳಿಗೆ ವಿಷಯವನ್ನು ತಿಳಿಸಿದ್ದು, ಮಾಧ್ಯಮದವರು ಮಂಗಳವಾರ ಬೆಳಿಗ್ಗೆ ಸುರಲ್ಪಾಡಿ ಮಸೀದಿ ಬಳಿ ಬಂದಾಗ ಅವರನ್ನು ಏಕಾಏಕಿಯಾಗಿ ದಿಗ್ಬಂದನದಲ್ಲಿಟ್ಟು ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಅವರ ಕ್ಯಾಮರ ಹಾಗೂ ಇನ್ನಿತ್ತರ ಸೊತ್ತುಗಳಿಗೆ ಹಾನಿ ಗೊಳಿಸುರುವುದಾಗಿ ತಿಳಿದುಬಂದಿದೆ. ಈ ವೇಳೆ ಸುದ್ದಿ ತಿಳಿದ ಬಜಪೆ ಪೋಲೀಸರು ತಕ್ಷಣ ಸ್ಥಳಾಕ್ಕಾಗಮಿಸಿ ಜಮಾತೆಯವರು ದಿಗ್ಬಂದನದಲ್ಲಿರಿಸಿದ ಮಾಧ್ಯಮದವರನ್ನು ಸುರಕ್ಷಿತವಾಗಿ ಕಳುಹಿಸಿದ್ದು ವಿವಾದಕ್ಕೆ ಕಾರಣವಾದ ಮದರಸ ಹಾಗೂ ಶಿಕ್ಷಕನ ನಡವಳಿಕೆಯ ಬಗ್ಗೆ ತನಿಕೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.

 

By suddi9

Leave a Reply

Your email address will not be published. Required fields are marked *