ಬಂಟ್ವಾಳ: ಸಾಮಾಜಿಕಜಾಲತಾಣದಲ್ಲಿ ಐತಿಹಾಸಿಕ ಹಿನ್ನಲೆ ಇರುವ ದಕ್ಷಿಣಕನ್ನಡ ಪವಿತ್ರಕ್ಷೇತ್ರ, ಕೋಟ್ಯಾಂತರ ಜನರ ಆರಾಧ್ಯದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಅವಹೇಳನ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಬಂಟ್ವಾಲ ಉಪ ವಿಭಾಗ ಕಛೇರಿ, ನಗರ ಠಾಣೆ ಮತ್ತು ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಗೆ ಮನವಿ ಸಲ್ಲಿಸಿದರು.

 

IMG-20160831-WA0049

IMG-20160831-WA0050

 ಬಂಟ್ವಾಳ ತಾಲೂಕು ಬಿ.ಸಿ.ರೋಡಿನ ವ್ಯಕ್ತಿಎಂದು ಹೇಳಿಕೊಳ್ಳುವ ಜಬ್ಬಾರ್ ಮತಾಂಧ ವ್ಯಕ್ತಿ ಹಿಂದುಗಳ ಕೋಟ್ಯಾಂತರ ಜನರ ಆರಾಧ್ಯದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಚಿತ್ರ ಮತ್ತು ಅಶ್ಲೀಲ ಶಬ್ಧಗಳಿಂದ ನಿಂಧಿಸಿ, ಟಿಪ್ಪಣಿ ಬರೆದಿರುವುದು ಹಿಂದೂ ಜನರ ಭಾವನೆಗಳಿಗೆ ಧಕ್ಕೆಉಂಟಾಗಿರುತ್ತದೆ. ಈ ವ್ಯಕ್ತಿ ದಕ್ಷಿಣಕನ್ನಡಜಿಲ್ಲೆಯಲ್ಲಿ ಕೋಮುಗಲಭೆ ಆಗಬೇಕು, ಮತ್ತು ದಕ್ಷಿಣಕನ್ನಡಜಿಲ್ಲೆಯಲ್ಲಿ ಶಾಂತಿಕದಡಬೇಕು ಮತ್ತುಜನರ ನೆಮ್ಮದಿಗೆ ಭಂಗತರಬೇಕು ಎಂಬ ಕಾರಣದಿಂದ ಈ ಸಂಚು ರೂಪಿಸಿರುವುದು ಮೇಲು ನೋಟಕ್ಕೆಕಂಡು ಬಂದಿರುವುದರಿಂದ ಮುಂದೆ ಈ ಕಾರಣಕ್ಕಾಗಿ ಜಿಲ್ಲೆಗಳಲ್ಲಿ ಕೋಮುಗಲಭೆಗಳು ಆಗಬಹುದು ಎನ್ನುವ ಕಾರಣದಿಂದಾಗಿ ಸಂಬಂಧಪಟ್ಟ ಪೊಲೀಸ್ ಇಲಾಖೆ ಕೂಡಲೇ ಅವಹೇಳನಕಾರಿಯಾಗಿ ಫೇಸ್‍ಬುಕ್ಕ್‍ನಲ್ಲಿ ಲೇಖನ ಬರೆದಿರುವ ಜಬ್ಬಾರ್ ಎಂಬವನನ್ನು ಪತ್ತೆಹಚ್ಚಿ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಹಾಗೂ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಲೇಖನ ಬರೆದು ಜಿಲ್ಲೆಯಲ್ಲಿ ಶಾಂತಿ ಕದಡಲು ಕಾರಣವಾಗಿರುವ ಮತಾಂಧ ವ್ಯಕ್ತಿ ಮತ್ತು ಅವನ ಸಹಚರರನ್ನು ತಕ್ಷಣ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಬಂಟ್ವಾಳ ತಾಲೂಕಿನಲ್ಲಿ ಉಗ್ರ ಹೋರಾಟವನ್ನು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಸಂದರ್ಭ ಹಿಂದೂ ಜಾಗರಣೆ ವೇದಿಕೆ ಅಧ್ಯಕ್ಷ ಚಂದ್ರ ಕಲಾಯಿ, ವಿಭಾಗ ಸಂಚಾಲಕ ರವಿರಾಜ್ ಬಿ.ಸಿರೋಡ್. ತಾ.ಸಂಚಾಲಕ ಪ್ರಶಾಂತ್ ಕೆಂಪುಗುಡ್ಡೆ, ಸಂಘಟನೆಯ ಪ್ರಮುಖರಾದ ಯೋಗೀಶ್ ತುಂಬೆ, ತಿರುಲೇಶ್ ಬೆಳ್ಳೂರು, ಜಗದೀಶ ಕಾಮಾಜೆ, ರಜನೀಶ್ ಸಿದ್ದಕಟ್ಟೆ, ಕಿರಣ್ ಮೂರ್ಜೆ, ಸತೀಶ್ ಶೆಟ್ಟಿ, ಕಿಶೋರ್ ಕುಮ್ಡೇಲು, ರವಿ ಬಂಗೇರ, ಹರೀಶ್ ತಲೆಂಬಿಲ, ರತ್ನಾಕರ ಶೆಟ್ಟಿ ಕಲ್ಲಡ್ಕ, ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *