ಬಂಟ್ವಾಳ: ಅಜ್ಜಿಬೆಟ್ಟು ಸ್ನೇಹಾಂಜಲಿ ಸೇವಾ ಸಂಘದ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಅಜ್ಜಿಬೆಟ್ಟು ಶಾಲಾ ಮೈದಾನದಲ್ಲಿ ನಡೆಯಿತು. ಈ ಸಂದರ್ಭ ನಿವೃತ್ತ ತಹಶೀಲ್ದಾರ್ ಕೆ.ಮೋಹನ್ ರಾವ್, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷ್ಮಣ ಕುಲಾಲ್, ಸ.ಹಿ.ಪ್ರಾ. ಶಾಲೆ ಬಿ.ಮೂಡದ ಮುಖ್ಯೋಪಾಧ್ಯಾಯಿನಿ ಕುಶಲ, ವೃತ್ತ ಕಛೇರಿ, ಕೆನರಾ ಬ್ಯಾಂಕ್ ಮಂಗಳೂರಿನ ಅಧಿಕಾರಿ ರಮೇಶ್ ನಾಯಕ್, ವಿಜಯ ಬ್ಯಾಂಕ್ ಮ್ಯಾನೇಜರ್ ಬೇಬಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
1 ರಿಂದ 3 ವರ್ಷದ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಿತು.

