ಬಂಟ್ವಾಳ:ಮೊಸರುಕುಡಿಕೆ ಪ್ರಯುಕ್ತ ನಡೆದ ಗೋವಿಂದ ಸ್ಪರ್ಧೆ ವೇಳೆ ಯುವಕನೋರ್ವ ಆಕಸ್ಮಿಕವಾಗಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಪಿಲಾತಬೆಟ್ಟು ಗ್ರಾಮದ ದೈಕಿನಕಟ್ಟೆ ನಿವಾಸಿ ಪಿ.ಎಂ.ಪ್ರಭಾಕರ ಅವರ ಪುತ್ರ ಶಿಶಿರ್(22) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:ಆ.28ರಂದು ಬೆಳ್ತಂಗಡಿಯಲ್ಲಿ ಮೊಸರುಕುಡಿಕೆ ಪ್ರಯುಕ್ತ ಆಯೋಜಿಸಲಾದ ಗೋವಿಂದಸ್ಪರ್ಧೆಯಲ್ಲಿ ಆಹ್ವಾನಿತ ವಿವಿಧ ತಂಡಗಳು ಭಾಗವಹಿಸಿದ್ದವು.ಪುಂಜಾಲಕಟ್ಟೆ ಸಮೀಪದ ಶ್ರೀ ರಾಮನಗರ ಶ್ರೀ ರಾಮಾಂಜನೆಯ ತಂಡವೂ ಇದರಲ್ಲಿ ಪಾಲ್ಗೊಂಡಿತ್ತು.ಈ ತಂಡದಲ್ಲಿ ಶಿಶಿರ್ ಅವರು ಭಾಗವಹಿಸಿದ್ದು ಕಟ್ಟಿದ್ದ ಮಡಕೆಯನ್ನು ಒಡೆಯಲು ಮಾನವ ಪಿರಮಿಡ್ ಮೇಲೇರಿ ಅಡ್ಡಲಾಗಿ ಕಟ್ಟಿದ ಹಗ್ಗ ಹಿಡಿದು ಹಲವಾರು ಮಡಕೆ ಒಡೆದಿದ್ದರು.ಕೊನೆಯ ಮಡಕೆ ಒಡೆಯುವ ಹಂತದಲ್ಲಿರುವಾಗ ಆಕಸ್ಮಿಕವಾಗಿ ಕೈ ಜಾರಿ ರಸ್ತೆಗೆ ಬಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಕೆಳಭಾಗದಲ್ಲಿದ್ದ ಇತರ ಸದಸ್ಯರು ಹಿಡಿಯಲೆತ್ನಿಸಿದರು.ಅದಾಗಲೇ ಶಿಶಿರ್ ರಸ್ತೆಗೆ ಬಿದ್ದಿದ್ದು ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದು ತತ್‍ಕ್ಷಣ ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

IMG-20160829-WA0009
ಪ್ರತಿಭಾವಂತ ಯುವ ಕಲಾವಿದ:ಶಿಶಿರ್ ಪ್ರತಿಭಾವಂತ ಕಲಾವಿದನಾಗಿದ್ದು ಎಳವೆಯಿಂದಲೇ ಮಿಮಿಕ್ರಿ ಕಲೆಯಲ್ಲಿ ಮಿಂಚಿದ್ದರು.ಪ್ರೌಢಶಾಲಾ ವಿಭಾಗದಲ್ಲಿ ಮಿಮಿಕ್ರಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು.ಕಾಲೇಜು ದಿನಗಳಲ್ಲಿ ಪ್ರಹಸನ,ನಾಟಕಗಳಲ್ಲಿ ಮುಂದಿದ್ದರು.ಎಬಿವಿಪಿ ಸದಸ್ಯರಾದ ಅವರು ಆರೆಸ್ಸೆಸ್‍ಕಾರ್ಯಕರ್ತರಾಗಿದ್ದರು.ಶ್ರೀ ರಾಮಾಂಜನೇಯ ಭಜನ ತಂಡದ ಸದಸ್ಯರಾಗಿದ್ದರು.
ಪ್ರೆಸ್ಸ್‍ನಲ್ಲಿ ಉದ್ಯೋಗಿಯಾಗಿರುವ ಪಿ.ಎಂ.ಪ್ರಭಾಕರ ಅವರ ಇಬ್ಬರು ಪುತ್ರರಲ್ಲಿ ಹಿರಿಯವರಾದ ಶಿಶಿರ್ ಮನೆಗೆ ಆಧಾರಸ್ತಂಭವಾಗಬೇಕಾಗಿದ್ದರು.ಬಿ.ಕಾಂ.ಪದವಿ ಬಳಿಕ ಬೆಂಗಳೂರು ಕಂಪನಿಯೊಂದರಲ್ಲಿ ಆರು ತಿಂಗಳ ಹಿಂದೆ ಉದ್ಯೋಗಕ್ಕೆ ಸೇರಿದ್ದರು.ರವಿವಾರ ಬೆಳಗ್ಗೆಯಷ್ಟೇ ಬೆಂಗಳೂರಿನಿಂದ ಆಗಮಿಸಿದ್ದರು.ಆದರೆ ವಿಧಿ„ ತನ್ನತ್ತ ಸೆಳೆದಿದೆ.

By suddi9

Leave a Reply

Your email address will not be published. Required fields are marked *