ಕೈಕಂಬ:ಪೊಂಪೈ ಸ್ಪೋಟ್ಸ್ ಮತ್ತು ಸಾಂಸ್ಕ್ರತಿಕ ಅಸೋಸಿಯನ್, ಲಯನ್ಸ್ ಕ್ಲಬ್ ಗುರುಪುರ ಕೈಕಂಬ, ಪೊಂಪೈ ಯಂಗ್ಸ್ಟಾರ್ಸ್ ಕ್ಲಬ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬೆನಕದಾಮ ಕೈಕಂಬ, ಚಾಲೆಂಜರ್ಸ್ ಪ್ರೆಂಢ್ಸ್ ಸರ್ಕಲ್ ಸುರಲ್ಪಾಡಿ, ಬಂಟ್ವಾಳ್ ಕ್ಯಾಥೋಲಿಕ್ ಕ್ರೇಡಿಟ್ ಕೋ.ಒಫ್. ಸೊಸೈಟಿ ಲಿಮಿಟೆಡ್ ಬಿಸಿರೋಡ್ ಕೈಕಂಬ, ಇವರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ರಕ್ತ ವರ್ಗೀಕರಣ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರ ಮತ್ತು ಆರೋಗ್ಯ ಶಿಬಿರ ಹಾಗೂ ಆಯುರ್ಸ್ಪರ್ಶ ಆಸ್ಪತ್ರೆ ಗಂಜಿಮಠ, ಆಯೋಜಿಸುವ ಮಧುಮೇಹ ಮುಕ್ತ ಭಾರತ ಜನಜಾಗ್ರತಿ ಸಂಕಲ್ಪ ಅಭಿಯಾನ ಆಗೋಸ್ಟ್ 28ರಂದು ಕೈಕಂಬದ ಪೊಂಪೈ ಸ್ಕ್ವೇರ್ನಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನವ ಹಕ್ಕುಗಳ ರಕ್ಷಣ ವೇದಿಕೆ ಉಡುಪಿ ಶೀ ರವೀಂದ್ರನಾಥ ಶಾನುಭೋಗ್ರವರು ನಡೆಸಿದರು. ಪೊಂಪೈ ಚರ್ಚಿನ ಗುರುಗಳು ಫಾ| ಆಂಟನಿ ಲೋಬೊ, ಡಾ| ಶ್ರೀಕುಮಾರ್, ಶೀರಾಮ್ ಭಟ್, ಹೆರಾಲ್ಡ್ ಡಿ’ಸೋಜಾ, ವಾಲ್ಟರ್ ಫೆರ್ನಾಂಡಿಸ್, ಡಾ| ಸತೀಶ್ ಶಂಕರ್, ಡಾ| ಸೋನಾಲಿ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಮಹೇಶ್ ಶೆಟ್ಟಿ ಸ್ವಾಗತಿಸಿ, ಜೆಫ್ರಿಯನ್ ತಾವ್ರೋ ವಂದಿಸಿದರು, ಪ್ರವೀಣ್ ಲೋಬೋ ಕಾರ್ಯಕ್ರ ಮ ನಿರೂಪಿಸಿದರು.




