ಯುವ ಜನತೆಗೆ ಕೃಷಿಸಂಸ್ಕøತಿ ಪರಿಚಯ ಉತ್ತಮ ಕಾರ್ಯ-ಐವನ್ ಡಿಸೋಜ
ಬಂಟ್ವಾಳ: ದೇವಶ್ಯಪಡೂರು ಗ್ರಾಮದ ಅಲ್ಲಿಪಾದೆಯಲ್ಲಿ ಮಂಗಳೂರು ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ನ ವಿದ್ಯಾರ್ಥಿಗಳಿಂದ ಕೆಸರುಗದ್ದೆಯಲ್ಲೊಂದು ದಿನ ಕಾರ್ಯಕ್ರಮ ಶನಿವಾರ ಜರಗಿತು.
ವಿಧಾನ ಪರಿಷತ್ನ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ನಗರವಾಸಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರ ಜೀವನ ಪದ್ಧತಿ,ಕೃಷಿ ಕಾರ್ಯಗಳ ಅರಿವನ್ನುಂಟು ಮಾಡಿಸಲು ಆಯೋಜಿಸಿರುವ ಕೆಸರುಗದ್ದೆಯಲ್ಲೊಂದು ದಿನ ಉತ್ತಮ ಕಾರ್ಯಕ್ರಮವಾಗಿದೆ.ತುಳು ನಾಡಿನ ಕೃಷಿ ಸಂಸ್ಕøತಿ,ಪರಂಪರೆಯನ್ನು ಯುವ ಜನತೆಗೆ ಪರಿಚಯಿಸುವುದರಿಂದ ಇಲ್ಲಿನ ಮಣ್ಣಿನ ಅದ್ಭುತ ಗುಣದ ಅರಿವುಂಟಾಗುವುದರ ಜೊತೆಗೆ ಗ್ರಾಮೀಣ ಜನರೊಂದಿಗೆ ಸ್ನೇಹ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಲಿ ಎಂದ ಅವರು ಜೀವನದಲ್ಲಿ ಶಿಸ್ತನ್ನು ಅಳವಡಿಸುವುದರಿಂದ ಉನ್ನತ ಮಟ್ಟಕ್ಕೇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಲ್ಲಿಪಾದೆ ಚರ್ಚ್ ಧರ್ಮಗುರು ಫಾ|ಗ್ರೆಗರಿ ಪಿರೇರಾ ಅವರು ತೆಂಗಿನ ತೆನೆ ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಭತ್ತದ ಬೇಸಾಯ ತುಳುನಾಡಿನ ಪ್ರಾಚೀನ ಸಂಸ್ಕøತಿಯಾಗಿದ್ದು ಹಿಂದಿನ ಜನರು ಕಷ್ಟದಲ್ಲಿ ಬೆಳೆ ಬೆಳೆಸುತ್ತಿದ್ದರು.ಕೃಷಿಗೆ ಉತ್ತೇಜನ ನೀಡುವ ಮೂಲಕ ಯುವ ಜನತೆಗೆ ಕೃಷಿಯಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬೇಕು ಎಂದು ಹೇಳಿದರು.ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಅವರು ಕ್ರೀಡಾಜ್ಯೋತಿ ಬೆಳಗಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್ಸೈ ಚಂದ್ರಶೇಖರಯ್ಯ ಮತ್ತು ರೋಶನಿ ನಿಲಯದ ಕಲಾಶಿಕ್ಷಕ ನವೀನ್,ಕಂಬಳದ ಓಟದ ಕೋಣಗಳ ಯಜಮಾನ ಇಬ್ರಾಹಿಂ ಅವರನ್ನು ಸಮ್ಮಾನಿಸಲಾಯಿತು.
ವಿದ್ಯಾರ್ಥಿ ಕ್ಷೇಮ ಅ„ಕಾರಿ ಇವ್ಲಿನ್ ಬೆನಿಸ್,ಸ್ಥಳದಾನಿಗಳಾದ ಗಿಲ್ಬರ್ಟ್ ನೊರೊನ್ಹ ದಂಪತಿ,ಪ್ರಮುಖರಾದ ಡೆಂಝಿಲ್ ನೊರೊನ್ಹ,ಲಿಯೋ ಫೆರ್ನಾಂಡಿಸ್,ಗ್ರಾ.ಪಂ.ಸದಸ್ಯರಾದ ಸುವರ್ಣ ಕುಮಾರ್ ಜೈನ್,ಅಸುಂತಾ ಫ್ರೇಮ್ ಫ್ರಾಂಕ್,ವಿನ್ಸೆಂಟ್ ಪಿಂಟೊ,ಉದ್ಯಮಿ ವಿಜಯ ಕುಮಾರ್,ಕಾಲೇಜು ಉಪನ್ಯಾಸಕರು,ಮತ್ತಿತರರು ಉಪಸ್ಥಿತರಿದ್ದರು.
ಆಲ್ ಕಾಲೇಜ್ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಥುನ್ ಸಿಕ್ವೇರಾ ಅವರು ಸ್ವಾಗತಿಸಿದರು.ಪ್ರಾಂಶುಪಾಲೆ ಡಾ|ಫೆÇ್ಲೀಸಿ ರಾಯಪ್ಪನ್ ಪ್ರಸ್ತಾವನೆಗೈದರು,ಹಳೆ ವಿದ್ಯಾರ್ಥಿ ಪ್ರಕಾಶ್ ವಂದಿಸಿದರು.ಮುಬಾರಿಷ್ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

