ಯುವ ಜನ ಸೇವಾ ಟ್ರಸ್ಟ್ ದರ್ಬೆ ಅಳಿಕೆ ಇದರ ವತಿಯಿಂದ ಎರಡನೇ ವರ್ಷದ ಕೃಷ್ಣಜನ್ಮಾಷ್ಠಮಿ ಉತ್ಸವವನ್ನು ಉಕ್ಕುಡ ದರ್ಬೆಯ ವಿಶ್ವಕರ್ಮ ಸಮುದಾಯ ಭವನದ ವಠಾರದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗಣಪತಿ ಆಚಾರ್ಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಶ್ರೀಕೃಷ್ಣ ವೇಷದ ಸ್ಪರ್ಧೆ ನಡೆಸಲಾಯಿತು. ಮತ್ತು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಸಂಜೆ ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಘು ಟಿ ವೈ, ಸಚ್ಚದಾನಂದ ಎಸ್ ಭಟ್ ಭಾಗವಹಿಸಿದ್ದರು.

