ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆಯು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಉವಾರ ಸಂಜೆ ಸಂಭ್ರಮ ಸಡಗರದಿಂದ ನಡೆಯಿತು.
ಆರಂಭದಲ್ಲಿ ಶ್ರೀಕೃಷ್ಣ ದೇವರ ಪಲ್ಲಕಿ ಮೆರವಣಿಗೆಗೆ ಮಂದಿರದ ಆಡಳಿತ ಮಂಡಳಿ ಗೌರವಾಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ವೈಭವದ ಶೊಭಾಯಾತ್ರೆಯಲ್ಲಿ ಶಿಲ್ಪಾ ಗೊಂಬೆ ಬಳಗ, ನೇತಾಜಿ ಯುವಕ ಮಂಡಲ, ಓಂಶಕ್ತಿ ಫ್ರೆಂಡ್ಸ್, ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ, ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು, ತ್ರಿಶೂಲ್ ಫ್ರೆಂಡ್ಸ್ ರಾಯಪ್ಪ ಕೋಡಿ ಇವರಿಂದ ವಿಭಿನ್ನ ರೀತಿಯ ಟ್ಯಾಬ್ಲೊ ಗಮನ ಸೆಳೆಯಿತು. ಶ್ರೀರಾಮ ವಿದ್ಯಾಕೇಂದ್ರದ ಅಪಾರ ಮಂದಿ ಪುಟಾಣಿಗಳು ಕೃಷ್ಣನ ವೇಷದಲ್ಲಿ ಗಮನ ಸೆಳೆದರೆ, ವಿವಿಧ ಭಜನಾ ತಂಡಗಳು ಸಮವಸ್ತ್ರಧಾರಿಗಳಾಗಿ ಮೆರುಗು ನೀಡಿದರು.

??????????
ವಿಸ್ವಸ್ಥ ಮಂಡಳಿ ಅಧ್ಯಕ್ಷ ಎ. ರುಕ್ಮಯ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಆಡಳಿತ ಮಂಡಳಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಕ.ಕೃಷ್ಣಪ್ಪ, ಜಿತೇಂದ್ರ ಎಸ್.ಕೊಟ್ಟಾರಿ, ರಾಜೇಶ್ ಕೊಟ್ಟಾರಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *